ಯಾರು ಏನೇ ಮಾಡಿದರೂ ಸರ್ಕಾರ ಉರುಳಲ್ಲ: ಡಿಕೆಶಿ

ಯಾರು ಏನೇ ಮಾಡಿದರೂ ಸರ್ಕಾರ ಉರುಳಲ್ಲ: ಡಿಕೆಶಿ

ಬೆಂಗಳೂರು, ಮೇ.2, ನ್ಯೂಸ್ ಎಕ್ಸ್ ಪ್ರೆಸ್: ಮೈತ್ರಿ ಸರ್ಕಾರದ ಬಗ್ಗೆ ಯರೂ ತಲೆಬಿಸಿ ಮಾಡಿಕೊಳ್ಳಬೇಡಿ. ಯಾರು ಏನೇ ಮಾಡಿದರೂ ಸರ್ಕಾರ ಉರುಳಲ್ಲ ಎಂದು ಬೆಂಗಳೂರಿನಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದರು. ಯಾರು ಏನೇ ಮಾಡಿದರೂ ಸರ್ಕಾರ ಉರುಳಲ್ಲ. ಸರ್ಕಾರ ಹಾಗೆಯೇ ಇರುತ್ತದೆ. ಉರುಳಿಸುತ್ತೇವೆ ಎನ್ನುವುದು ಬಿಜೆಪಿಯ ಭ್ರಮೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ದಿನವೂ ಡೆಡ್​ ಲೈನ್ ಕೊಡ್ತಾರೆ. 22 ಸೀಟು ಗೆಲ್ತೇವೆ, 24 ಗೆಲ್ತೇವೆ, ಸರ್ಕಾರ ಉರುಳಿಸ್ತೇವೆ ಅಂತಾರೆ. ಇನ್ನು ನೂರು ಡೇಟ್ ಕೊಡಲಿ, ಸರ್ಕಾರಕ್ಕೆ ಏನೂ ಆಗೋದಿಲ್ಲ. ಯಾರು ತಲೆ ಕೆಡೆಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಬೇಕಿದ್ರೆ ಹಾಗೇ ಆಸೆ ಪಡುತ್ತಿರಲಿ ಎಂದು ಕಾಲೆಳೆದರು. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವಿಷಯದ ಬಗ್ಗೆ ನಾನು, ಡಿಸಿಎಂ, ದಿನೇಶ್ ಚರ್ಚೆ ಮಾಡಿದ್ದೇವೆ. ಪಕ್ಷ ನಮಗೆ ಜವಾಬ್ದಾರಿ ವಹಿಸಿದೆ. ಅದಕ್ಕಾಗಿ ಚುನಾವಣಾ ಪ್ರಚಾರ,‌ ಸಿದ್ಧತೆ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮಿಬ್ಬರಿಗೂ ಚುನಾವಣಾ ಉಸ್ತುವಾರಿ ನೀಡಿದ್ದಾರೆ. ಹೀಗಾಗಿ ಪ್ರಚಾರ, ಅಲ್ಲಿಗೆ ಭೇಟಿ ನೀಡುವ ಬಗ್ಗೆ ನಿನ್ನೆ ಚರ್ಚಿಸಿದ್ದೇವೆ ಎಂದಿದ್ದಾರೆ. ಸುಮಲತಾ ಜೊತೆ ಕಾಂಗ್ರೆಸ್ ನಾಯಕರು ನಡೆಸಿದ ಸಭೆ ಬಗ್ಗೆ ಮಾತನಾಡಿ, ಚೆಲುವರಾಯಸ್ವಾಮಿ ಡಿನ್ನರ್ ಪಾರ್ಟಿ ವಿಡಿಯೋ ಬಹಿರಂಗದಿಂದ ಸರ್ಕಾರಕ್ಕೆ ಯಾವುದೇ ಮುಜುಗರ ಇಲ್ಲ. ನಾನು, ದಿನೇಶ್ ಡಿಸಿಎಂ ನಿವಾಸಕ್ಕೆ ಭೇಟಿ ಕೊಟ್ಟಿದ್ದೆವು. ಆಗ ನಾವು ಚೆಲುವರಾಯಸ್ವಾಮಿ ವಿಚಾರ ಚರ್ಚಿಸಿಲ್ಲ. ಚೆಲುವರಾಯಸ್ವಾಮಿ ಭೇಟಿಗೆ ವಿಶೇಷ ಅರ್ಥ ಬೇಕಿಲ್ಲ ಎಂದರು. ಧರ್ಮಸ್ಥಳದಲ್ಲಿ ಮುದ್ದಹನುಮೇಗೌಡರ ಆಣೆ ಪ್ರಮಾಣ ವಿಚಾರ ಮಾತನಾಡಿ, ಅವರಿಗೆ ಭಗವಂತ ಒಳ್ಳೆಯದು ಮಾಡಲಿ. ಅವರು ನಮ್ಮ ಉತ್ತಮ ಸ್ನೇಹಿತರು. ರಾಜಕೀಯ ನಿವೃತ್ತಿ ತೆಗೆದುಕೊಳ್ಳೋದು ಬೇಡ. ಶಕ್ತಿ ಇರುವವರೆಗೂ ರಾಜಕಾರಣ ಮಾಡಬೇಕು. ಗೆಲುವು ಸೋಲು ಎಲ್ಲವನ್ನೂ ಎದುರಿಸಬೇಕು. ಅವರೊಬ್ಬ ಗುಡ್ ಜಂಟಲ್ ಮ್ಯಾನ್. ಏನೋ ಸ್ವಲ್ಪ ಸಮಸ್ಯೆಯಾಗಿದೆ. ಅವರಿಗೆ ಮುಂದೆ ಅವಕಾಶ ಮಾಡಿಕೊಡುವ ಕೆಲಸ ಮಾಡ್ತೇವೆ ಎಂದರು. ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ವಿಚಾರ ಪ್ರತಿಕ್ರಿಯೆಗೆ ನಿರಾಕರಿಸಿದ ಡಿಕೆಶಿ, ನಾನು ಬೇರೆ ವಿಷಯಗಳ ಬಗ್ಗೆ ರಿಯಾಕ್ಟ್​ ಮಾಡಲ್ಲ. ನನಗೇನು ಪ್ರಶ್ನೆ ಕೇಳಿದ್ದೀರೋ ಅದಕ್ಕೆ ಏನು ಉತ್ತರ ಕೊಡಬೇಕೋ ಅದನ್ನು ಕೊಡ್ತೀನಿ. ನಾನು ನಾಯಕನಲ್ಲ. ಒಬ್ಬ ಜವಾಬ್ದಾರಿಯುತ ಕಾರ್ಯಕರ್ತ ಅಷ್ಟೇ. ಕುಂದಗೋಳಕ್ಕೆ ನಾಳೆ ಹೋಗ್ತಾ ಇದ್ದೇನೆ. ಒಂದು ವರ್ಕರ್ಸ್ ಮೀಟಿಂಗ್ ‌ಮುಗಿಸಿ ನಾಳೆ ಸಂಜೆ ಹೋಗ್ತೇನೆ. ಅಲ್ಲಿಯೂ ಯಾವುದೇ ಬಂಡಾಯ ಇಲ್ಲ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos