ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮೊಟ್ಟ  ಮೊದಲ ಸಾಧನೆ

ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮೊಟ್ಟ  ಮೊದಲ ಸಾಧನೆ

ಬೆಂಗಳೂರು, ಜು. 2: ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಮೊಟ್ಟ  ಮೊದಲ ಅತ್ಯಾಧುನಿಕ 3 ಡಿ ತಂತ್ರಜ್ಞಾನದ, ಆಧುನಿಕ ವಿನ್ಯಾಸದಲ್ಲಿ  ಸಿದ್ಧಪಡಿಸಿ ಮಹತ್ತರ ಸಾಧನೆ ಮಾಡಿದ್ದಾರೆ.

ಎಚ್.ಎಸ್. ಚೇತನ್ ಗೌಡ, ಎಸ್, ಮೋಹನ್ ರಾವ್, ಜೆ. ರೋಹಿತ್ ಹಾಗೂ ಎಸ್. ಪೂರ್ವಿಕ ಈ ಸಾಧನೆ ಮಾಡಿದ್ದು, ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಅದ ಡಾ.ಇಳಗೋವನ್.ಎಂ   ಅವರ ಸಾರಥ್ಯದಲ್ಲಿ ಈ ಪ್ರಿಂಟರ್ ಅನ್ನು ವಿದ್ಯಾರ್ಥಿಗಳು ಅವಿಷ್ಕಾರಗೊಳಿಸಿದ್ದಾರೆ.

ಮೂಲ ಮಾದರಿಯ ಪರಿಕಲ್ಪನೆಯಡಿ ನೇರವಾಗಿ ಘನ ಉತ್ಪನ್ನಗಳನ್ನು ಬಳಸಿ ಈ ಪ್ರಿಂಟರ್ ಉತ್ಪಾದಿಸಿದ್ದಾರೆ. ಸಾಂಪ್ರದಾಯಿಕ ಉತ್ಪಾದನೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಉತ್ಪಾದನಾ ತಂತ್ರಜ್ಞಾನದ ಮೂಲಕ 3 ಡಿ ಪ್ರಿಂಟರ್ ಅನ್ನು ಅನ್ವೇಷಣೆ ಮಾಡಿ ಸಾಧನೆಗೈದಿದ್ದಾರೆ. ತಂತ್ರಜ್ಞಾನದ ಆಲೋಚನೆಗಳನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತಂದಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಿಷ್ಕರಿಸಿರುವ ಈ ತಂತ್ರಜ್ಞಾನ ಒಂದು ಹೆಜ್ಜೆ ಮುಂದಿದೆ.

ಬಹುತೇಕ 3 ಡಿ ಪ್ರಿಂಟರ್‌ಗಳು ಡೆಸ್ಕ್ ಟಾಪ್, ಇಲ್ಲವೆ ಈಗ ಬಳಕೆಯಲ್ಲಿರುವ ಕಾರ್ಟೆಸಿಯನ್ ಮಾದರಿಯಲ್ಲಿವೆ. ಇದು ಹೆಚ್ಚು ಸ್ಥಳವನ್ನು ಆಕ್ರಮಿಸುವ ಜತೆಗೆ ಕಡಿಮೆ ಉತ್ಪಾದನೆ ಮಾಡುತ್ತವೆ. ರೋಬೋಟ್‌ನ ಕೈಗಳಿರುವಂತೆ ವಿನಾಸಗೊಳಿಸಿರುವ ಈ ನವ ನವೀನ ಪ್ರಿಂಟರ್ ನಿಂದ ಹೆಚ್ಚು ಕೆಲಸ ತೆಗೆಯುವ ಜತೆಗೆ ಕಡಿಮೆ ಸ್ಥಳವನ್ನು ಇದು ಬೇಡುತ್ತದೆ. 3 ಡಿ ತಂತ್ರಜ್ಞಾನದ ರೋಬೋಟ್ ಮಾದರಿಯ ಕೈಗಳು ಬಹುಪಯೋಗಿ ಎಂಬುದು ವಿಶೇಷ. ರೋಬೊಟ್ ತೋಳಿನ, ಸೂಕ್ತ ಕಮಾಂಡ್ ಮೂಲಕ ಪ್ರಿಂಟಿಂಗ್ ಗೆ ಸಂಬಂಧಪಟ್ಟಂತೆ ವಿವಿಧ ಕೆಲಸಗಳನ್ನು ಇದರಿಂದ ಮಾಡಿಸಬಹುದು.

ಈ ತಂತ್ರಜ್ಞಾನದ ಪ್ರಮುಖ ಅಂಶಗಳಂದರೆ ಈಗ ಬಳಕೆಯಲ್ಲಿರುವ ತಂತ್ರಜ್ಞಾನಕ್ಕಿಂತ ಇದು ಶ್ರೇಷ್ಠ, ಈಗಿರುವ ತಂತ್ರಜ್ಞಾನಕ್ಕಿಂತ ಕಡಿಮೆ ವೆಚ್ಚದಲ್ಲಿ ಇದನ್ನು ತಯಾರಿಸಲಾಗಿದೆ. ಸರಳ ವಿನ್ಯಾಸ, ಸ್ಪಷ್ಟತೆಯಲ್ಲಿ ಗಮನ ಸೆಳೆಯುತ್ತದೆ. ಘನ ಮಾದರಿಯ ತಂತ್ರಾಂಶ ಬಳಸಿ ರೋಬೊಟ್ ತೋಳು ರಚಿಸಲಾಗಿದೆ. ಅಲ್ಯುಮೀನಿಯಮ್ 6061 ಅನ್ನು ಬಳಸಲಾಗಿದೆ. ಇದಕ್ಕೆ ಸೂಕ್ಷ್ಮ ನಿಯಂತ್ರಕ ವ್ಯವಸ್ಥೆನ್ನು ಅಡಕಗೊಳಿಸಲಾಗಿದೆ. ಬಹು ಉದ್ದೇಶದ ಈ 3 ಡಿ ತಂತ್ರಜ್ಞಾನದ ಪ್ರಿಂಟರ್ ಅನ್ನು ಕಡಿಮೆ ಮತ್ತು ಕೈಗೆಟುವ ಬೆಲೆಯಲ್ಲಿ ತಯಾರಿಸಲಾಗಿದೆ. ಜೈವಿಕವಾಗಿ ವಿಘಟನೆ ಹೊಂದುವ ತಂತ್ರಜ್ಞಾನದ ಪರಿಕರಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಪ್ರಸ್ತುತ ಪ್ರೊಟೋಟೈಪ್ ಮಾದರಿ 3 ಡಿ ತಂತ್ರಜ್ಞಾನದ ಪ್ರಿಂಟರ್ ತಯಾರಿಸಲು ಸುಮಾರು 25 ಸಾವಿರ ರೂಪಾಯಿ ವೆಚ್ಚವಾಗಲಿದ್ದು,  ಸಾಮೂಹಿಕ ಉತ್ಪಾದನೆ ಮಾಡಿದರೆ ಉತ್ಪಾದನಾ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ.

ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಶಿವಬಸಪ್ಪ , ಡಾ. ನಾಗಭೂಷಣ್ ಕೆಆರ್ ,ಡಾ. ಮಹದೇವಸ್ವಾಮಿ ಸಪ್ತಗಿರಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗ  ಮುಖ್ಯಸ್ಥರು.ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos