ಸಂತ ರವಿದಾಸ್ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಸಂತ ರವಿದಾಸ್ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವಾರಣಾಸಿಯಲ್ಲಿ ಸಂತ ಗುರು ರವಿ ದಾಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಂತರವಿದಾಸ್ ಅವರ 647 ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಇಬ್ಬರು ನಾಯಕರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

ಸಂತ ರವಿದಾಸ್ ಅವರ ಜನ್ಮದಿನದ ಪುಣ್ಯ ಸಂದರ್ಭದಲ್ಲಿ, ನಾನು ನಿಮ್ಮೆಲ್ಲರನ್ನು ಅವರ ಜನ್ಮಸ್ಥಳಕ್ಕೆ ಸ್ವಾಗತಿಸುತ್ತೇನೆ. ಈ ಸಂದರ್ಭದಲ್ಲಿ ನೀವು ದೂರದ ಸ್ಥಳಗಳಿಂದ ಬಂದಿದ್ದೀರಿ, ವಿಶೇಷವಾಗಿ ಪಂಜಾಬ್‌ನ ನನ್ನ ಸಹೋದರ ಸಹೋದರಿಯರೇ… ವಾರಣಾಸಿಯು ಮಿನಿ ಪಂಜಾಬ್ ಆಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ಹೇಳಿದ್ದಾರೆ.  ತಮ್ಮ ಭಾಷಣದಲ್ಲಿ,  ವಿರೋಧ ಪಕ್ಷಗಳ ‘ಇಂಡಿಯಾ’ ಬ್ಲಾಕ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದು ಅದರ  ಸದಸ್ಯರು ಜಾತಿವಾದದ ಹೆಸರಿನಲ್ಲಿ ಜನರನ್ನು ಶೋಷಿಸುತ್ತಿದ್ದಾರೆ. ಅವರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಕಾಳಜಿ ವಹಿಸುತ್ತಾರೆ. ದಲಿತರು ಮತ್ತು ಬುಡಕಟ್ಟು ಜನಾಂಗದವರ ಕಲ್ಯಾಣದ ಬಗ್ಗೆ ಯೋಚಿಸುವುದಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

.

ಫ್ರೆಶ್ ನ್ಯೂಸ್

Latest Posts

Featured Videos