ಮಹಿಳೆಗೆ ಹೊಡೆದ ಆರೋಪ: ಸಂತ ಸ್ವಾಮಿ ಆನಂದಗಿರಿ ಬಂಧನ

ಮಹಿಳೆಗೆ ಹೊಡೆದ ಆರೋಪ: ಸಂತ ಸ್ವಾಮಿ ಆನಂದಗಿರಿ ಬಂಧನ

ಸಿಡ್ನಿ, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಪ್ರಯಾಗರಾಜದ ಸಂತ ಸ್ವಾಮಿ ಆನಂದ್ ಗಿರಿಯನ್ನು ಸಿಡ್ನಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರಿಗೆ ಹೊಡೆಯುತ್ತಿದ್ದ ಎಂಬ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಸ್ಥಳೀಯ ಕೋರ್ಟ್ ಸ್ವಾಮಿಯನ್ನು ಜೂನ್ 26 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. 38 ವರ್ಷದ ಬಂಧಿತ ಸ್ವಾಮಿ ಆನಂದ್ ಗಿರಿ ಅಖಿಲ ಭಾರತೀಯ ಅಖಾರಾ ಪರಿಷತ್ ನ ವಿದ್ಯಾರ್ಥಿಯಾಗಿದ್ದಾನೆ. ಅಖಿಲ ಭಾರತೀಯ ಅಖಾರಾ ಪರಿಷತ್ ನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಶಿಷ್ಯವಾಗಿದ್ದಾನೆ. ದೇಶ-ವಿದೇಶಗಳಲ್ಲಿ ಯೋಗ ಕಲಿಸುವ ಕೆಲಸವನ್ನು ಆನಂದ್ ಗಿರಿ ಮಾಡ್ತಾನೆ. ಘಟನೆ 2016 ರದ್ದು ಎಂದು ನರೇಂದ್ರ ಗಿರಿ ಹೇಳಿದ್ದಾರೆ. ಬೆನ್ನು ತಟ್ಟಿ ಆಶೀರ್ವಾದ ಮಾಡುವ ಪದ್ಧತಿಯನ್ನು ವಿದೇಶಿ ಮಹಿಳೆಯರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆನಂದ್ ಗಿರಿ ಹೊಡೆದಿದ್ದಾನೆಂದು ದೂರು ನೀಡಿದ್ದಾರೆಂದು ನರೇಂದ್ರ ಗಿರಿ ಹೇಳಿದ್ದಾರೆ. ಇಬ್ಬರು ಮಹಿಳೆಯರಿಗೆ ಆನಂದ್ ಗಿರಿ ಹೊಡೆದಿದ್ದಾನೆಂಬ ಆರೋಪವಿದೆ. ಅಂತರಾಷ್ಟ್ರೀಯ ಯೋಗ ಗುರು ಎಂದು ಆನಂದ್ ಗಿರಿ ಪ್ರಸಿದ್ಧಿ ಪಡೆದಿದ್ದು, ಹಾಂಕಾಂಗ್, ಲಂಡನ್, ದಕ್ಷಿಣ ಆಫ್ರಿಕಾ, ಪ್ಯಾರಿಸ್ ಮತ್ತು ಮೆಲ್ಬರ್ನ್ ಸೇರಿದಂತೆ 30 ದೇಶಗಳಿಗೆ ಪ್ರಯಾಣ ಬೆಳೆಸುತ್ತಿರುತ್ತಾನೆ. ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸ ಮಾಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos