ಕಿರಿಯ ಎಂಜಿನಿಯರ್ ಮೆರಿಟ್ ಲಿಸ್ಟ್ನ ಟಾಪರ್ ಆದ ಸನ್ನಿ!

ಕಿರಿಯ ಎಂಜಿನಿಯರ್ ಮೆರಿಟ್ ಲಿಸ್ಟ್ನ ಟಾಪರ್ ಆದ ಸನ್ನಿ!

ಪಾಟ್ನಾ: ಬಿಹಾರದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ಇಂದು ಕಿರಿಯ ಎಂಜಿನಿಯರ್ ಹುದ್ದೆಯ ನೇಮಕಾತಿಗಾಗಿ ತಾತ್ಕಾಲಿಕ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪರ್ ಆಗಿದ್ದಾರೆ.

ಪಿಎಚ್‍ಇಡಿ ಅಧಿಕೃತ ವೆಬ್‍ ಸೈಟ್‍ ನಲ್ಲಿ ಪ್ರಕಟವಾಗಿರುವ ಫಲಿತಾಂಶದ ಪ್ರಕಾರ 27 ವರ್ಷ ವಯಸ್ಸಿನ ಮಹಿಳೆ ಲಿಯೋನ್, ಐದು ವರ್ಷದ ಕಾರ್ಯಾನುಭವವನ್ನೂ ಹೊಂದಿದ್ದಾರೆ. ಆಕೆಯ ತಂದೆ ಲಿಯೋನಾ ಲಿಯೋನ್ ಮುಕ್ತ ವರ್ಗಕ್ಕೆ ಸೇರಿದವರು. ಇವರು ಶೈಕ್ಷಣಿಕ ದಾಖಲೆಗಳ ಆಧಾರದಲ್ಲಿ 73.50 ಅಂಕಗಳನ್ನು ಗಳಿಸಿದ್ದಾರೆ. ಅನುಭವಕ್ಕಾಗಿ 25 ಸಂಪೂರ್ಣ ಅಂಕ ಪಡೆದಿದ್ದಾರೆ. ಎರಡೂ ಸೇರಿಸಿದ 98.50 ಅಂಕಗಳೊಂದಿಗೆ ಮೆರಿಟ್‍ಲಿಸ್ಟ್‍ನಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ ಎಂದು ಹೇಳಿದೆ.

“ಇದು ಕೆಲವರು ನಡೆಸಿದ ಕುಚೋದ್ಯ. ಅಭ್ಯರ್ಥಿಗಳು ಪಡೆದ ಅಂಕದ ಆಧಾರದಲ್ಲಿ ದತ್ತಾಂಶ ಬಿಡುಗಡೆ ಮಾಡಲಾಗಿದೆ. ಯಾರು ತಮ್ಮ ಹೆಸರು, ತಂದೆಯ ಹೆಸರನ್ನು ಅರ್ಜಿ ನಮೂನೆಯಲ್ಲಿ ಬರೆದಿದ್ದಾರೋ ಅದನ್ನೇ ಇಲಾಖೆ ದಾಖಲಿಸುತ್ತದೆ. ಒಟ್ಟು 17,911 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಒಟ್ಟು 214 ಖಾಲಿ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆದಿದೆ ಮುಂದಿನ ಸುತ್ತಿಗೆ 642 ಮಂದಿ ಆಯ್ಕೆಯಾಗಿದ್ದಾರೆ. ಸನ್ನಿ ಲಿಯೋನ್ ಕೂಡಾ ಸರ್ಕಾರಿ ಹುದ್ದೆಯ ಆಕಾಂಕ್ಷಿ” ಎಂದು ಪಿಎಚ್‍ಇಡಿ ಜಂಟಿ ಕಾರ್ಯದರ್ಶಿ ಅಶೋಕ್ ಕುಮಾರ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos