ಲೈಂಗಿಕ ಕಾರ್ಯಕರ್ತೆ ಬಗ್ಗೆ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ!?

ಲೈಂಗಿಕ ಕಾರ್ಯಕರ್ತೆ ಬಗ್ಗೆ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ!?

ನ್ಯೂಸ್ ಎಕ್ಸ್ ಪ್ರೆಸ್, ಮಾ.12: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಪದ್ಮಾವತ್ ಚಿತ್ರದ ಬಳಿಕ ಮತ್ತೊಂದು ಜೀವನ ಚರಿತ್ರೆಯ ಚಿತ್ರಕ್ಕೆ ಕೈ ಹಾಕಿದ್ದಾರೆ.

ಹೌದು, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಮುಂಬೈ ಮೂಲದ ಗಂಗೂಬಾಯಿ ಕೊತೆವಾಲಿ ಎಂಬ ಲೈಂಗಿಕ ಕಾರ್ಯಕರ್ತೆಯೊಬ್ಬರ ಜೀವನವನ್ನು ತೆರೆ ಮೇಲೆ ತರಲು ನಿರ್ಧರಿಸಿದ್ದಾರೆ. ಗಂಗೂಬಾಯಿ ಲೈಂಗಿಕ ಕಾರ್ಯಕರ್ತೆಯರ ಹಕ್ಕಿಗಾಗಿ ಹೋರಾಟ ಮಾಡಿದ್ದರು. ಸಂಜಯ್ ಲೀಲಾ ಬನ್ಸಾಲಿ ಅವರು ಈ ಬಗ್ಗೆ ಸಾಕಷ್ಟು ಆಸಕ್ತರಾಗಿದ್ದು, ಇದೀಗ ಸಿನಿಮಾ ಮಾಡಲು ಹೊರಟಿದ್ದಾರೆ.

ಐಎಮ್ ಪಿಪಿ ನಲ್ಲಿ ಈಗಾಗಲೇ ಬನ್ಸಾಲಿ ತಮ್ಮ ಚಿತ್ರದ ಹೆಸರನ್ನು `ಗಂಗೂಬಾಯಿ’ ಎಂದು ರಿಜಿಸ್ಟರ್ ಮಾಡಿಸಿದ್ದು, ಮುಂದಿನ ವರ್ಷ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos