ಬಿಗ್‌ ಬಾಸ್‌ ಸಂಗೀತಾ ಫಿನಾಲೆ ಟಿಕೆಟ್‌ ಪಡೆದ ಮೊದಲ ಸ್ಪರ್ಧಿ

ಬಿಗ್‌ ಬಾಸ್‌ ಸಂಗೀತಾ ಫಿನಾಲೆ ಟಿಕೆಟ್‌ ಪಡೆದ ಮೊದಲ ಸ್ಪರ್ಧಿ

ಬೆಂಗಳೂರು: ಬಿಗ್ ಬಾಸ್‌ ಕನ್ನಡ ಸೀಸನ್‌ 10 ರ ಟಿಕೆಟ್‌ ಟು ಫಿನಾಲೆ ಇತ್ತು. ಮೊದಲು ಬಿಗ್‌ ಬಾಸ್‌ ನೀಡುವ ಟಾಸ್ಕ್‌ ಆಡಿ ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರು ಫಿನಾಲೆಗೆ ಹೋಗುತ್ತಾರೆ ಎನ್ನಲಾಗಿತ್ತು.

ಬಿಗ್‌ ಬಾಸ್‌ ನೀಡಿದ ಟಾಸ್ಕ್‌ ಅನುಸಾರ ಆಡಿ ಡ್ರೋನ್‌ ಪ್ರತಾಪ್‌ 420 ಅಂಕ ಗಳಿಸಿದ್ದರು. ಮನೆಯ ಇತರ ಸದಸ್ಯರಿಗಿಂತ ಪ್ರತಾಪ್‌ ಹೆಚ್ಚು ಪಾಯಿಂಟ್ಸ್‌ ಹೊಂದಿದ್ದರು. ಕೊನೆಯ ಟಾಸ್ಕ್‌ ಮುಕ್ತಾಯವಾದಾಗ ಎಲ್ಲರೂ ಪ್ರತಾಪ್‌ ಫಿನಾಲೆಗೆ ಹೋದರೆಂದೇ ಭಾವಿಸಿದರು.

ಬಿಗ್‌ ಬಾಸ್‌ ಆಗ ಒಂದು ಟ್ವಿಸ್ಟ್‌ ನೀಡಿದರು. ಹೆಚ್ಚು ಅಂಕ ಪಡೆದ ಮೂವರು ಸ್ಪರ್ಧಿಗಳ ಮಧ್ಯೆ ವೋಟಿಂಗ್‌ ನಡೆಸಿದರು. ಸಂಗೀತಾ ಅತಿ ಹೆಚ್ಚು ವೋಟ್‌ ಪಡೆದರು. ಪ್ರತಾಪ್‌ 420 ಪಾಯಿಂಟ್ಸ್‌ ಹೊಂದಿದ್ದರೂ ಅವರಿಗೆ ಒಂದೇ ಒಂದು ವೋಟ್‌ ಬಂದ ಕಾರಣ, ಫಿನಾಲೆಗೆ ಎಂಟ್ರಿ ಪಡೆಯಲಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos