‘ಸ್ಯಾಂಡಲ್ ವುಡ್’ಗೆ ಚರಣ್ ರಾಜ್ ಪುತ್ರ

‘ಸ್ಯಾಂಡಲ್ ವುಡ್’ಗೆ ಚರಣ್ ರಾಜ್ ಪುತ್ರ

ಬೆಂಗಳೂರು, ಮಾ.11, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡದ ಹೀರೋ-ವಿಲನ್‍ಗಳ ಮಕ್ಕಳು ಸ್ಯಾಂಡಲ್‍ವುಡ್‍ ನಲ್ಲಿ ಮಿಂಚುತ್ತಿರುವ ಮಧ್ಯೆ, ಇದೇ ರೀತಿ ಮಿಂಚಲು ಕನಸು ಕಾಣುತ್ತಿರುವವರ ಉದಾಹರಣೆಗಳು ಬೇಕಾದಷ್ಟಿವೆ. ಆ ಸಾಲಿಗೆ ಹೊಸ ಸೇರ್ಪಡೆ ಎಂದರೆ ನಟ ತೇಜ್.

ಅಂದಹಾಗೆ ಇವರು ಕನ್ನಡ ಚಿತ್ರಗಳಲ್ಲಿ ವಿಲನ್ ಹಾಗೂ ಹೀರೋ ಎರಡೂ ಆಗಿ ಮಿಂಚಿರುವ ಹಿರಿಯ ನಟ ಚರಣ್ ರಾಜ್ ಅವರ ಪುತ್ರ. ಈಗಾಗಲೇ ತಮಿಳು ಸಿನಿಮಾ “90 ಎಮ್‍ಎಲ್”ನಲ್ಲಿ ಅಭಿನಯಿಸಿರುವ ಇವರು, ಆ ಚಿತ್ರದ ಪ್ರಚಾರಕ್ಕಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು.

ಈ ಸಂದರ್ಭದಲ್ಲಿ ಅಪ್ಪ-ಮಗ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ವಿಶೇಷ ಏನೆಂದರೆ ತೇಜ್ ಕನ್ನಡ ಚಿತ್ರಗಳತ್ತ ನೋಟ ನೆಟ್ಟಿದ್ದಾರೆ ಎನ್ನಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಉತ್ತಮ ಕಲಾವಿದನಾಗಿ ಗುರುತಿಸಿಕೊಳ್ಳಬೇಕೆನ್ನುವ ಆಶಯ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos