ಕೆಸಿಸಿ: ಸ್ಯಾಂಡಲ್ವುಡ್ ಕ್ರಿಕೆಟ್ ಹಬ್ಬಕ್ಕೆ ಕೌಂಟ್ ಡೌನ್!

ಕೆಸಿಸಿ: ಸ್ಯಾಂಡಲ್ವುಡ್ ಕ್ರಿಕೆಟ್ ಹಬ್ಬಕ್ಕೆ ಕೌಂಟ್ ಡೌನ್!

ಬೆಂಗಳೂರು: ಕಿಚ್ಚ ಸುದೀಪ್ ಐದು ವರ್ಷದ ಹಿಂದೆ ಇಡೀ ಸ್ಯಾಂಡಲ್ವುಡ್ನನ್ನ ಒಂದು ಮಾಡೋಕೆ ಹುಟ್ಟುಹಾಕಿದ್ದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ ಈಗ ನಾಲ್ಕನೇ ಆವೃತ್ತಿಗೆ ಬಂದಿದೆ. ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ ಕ್ರಿಕೆಟ್ ಹಬ್ಬ. ಕೆಸಿಸಿ ಸೀಸನ್ 4ರ ತಯಾರಿಯಲ್ಲಿ ಕನ್ನಡ ಸ್ಟಾರ್ಸ್. ಸ್ಯಾಂಡಲ್ವುಡ್ ಕ್ರಿಕೆಟ್ ಹಬ್ಬಕ್ಕೆ ಕೆಸಿಸಿಗೆ ಕೌಂಟ್ ಡೌನ್ ಶುರುವಾಗಿದೆ. ಡಿಸೆಂಬರ್ 23ರಿಂದ 25ರ ವರೆಗೆ ನಡೆಯಲಿರುವ ಕ್ರಿಕೆಟ್ ಕಾಳಗಕ್ಕೆ ಚಂದನವನ ತಾರೆಗಳು ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ.

ನಟ ಶಿವರಾಜಕುಮಾರ್, ಕಿಚ್ಚ ಸುದೀಪ್, ಗಣೇಶ್, ಡಾಲಿ ಧನಂಜಯ್ ಸೇರಿದಂತೆ ಸ್ಟಾರ್ ಪ್ಲೇಸ್ ಗಳು ತಂಡದ ಜೊತೆಗೆ ಅಖಾಡಕ್ಕೆ ಇಳಿದು, ಪ್ರಾಕ್ಟೀಸ್ ಮಾಡುತ್ತಿದ್ದಾರೆ.  ತಂಡದ ಸದಸ್ಯರಿಗೆ ಜೆರ್ಸಿ ಗಿಫ್ಟ್ ಕೊಟ್ಟ ಗೀತಾ ಕುಮಾರ್. ಈ ಬಾರಿ ಕೆ ಸಿ ಸಿ ಎಲ್ಲಿ ಒಟ್ಟು ಆರು ತಂಡಗಳು ಭಾಗವಹಿಸುತ್ತಿದೆ. ಪ್ರತಿ ತಂಡದಲ್ಲಿ ಒಬ್ಬೊಬ್ಬ ಸ್ಟಾರ್ಪ್ಲೇಯರ್ ಇರ್ತಾರೆ. ಮೂರು ದಿನಗಳ ಕಾಲ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ನಡೆಯು ಈ ಪದ್ಯಕ್ಕೆ ಸಿಎಂ ಸಿದ್ದರಾಮಯ್ಯ ಗೆ ಶಿವಣ್ಣ ಹಾಗೂ ಕೆ ಸಿ ಸಿ ಕಮಿಟಿ ಆಹ್ವಾನ ಕೊಟ್ಟಿದೆ. ಮತ್ತೊಂದು ಕಡೆ ಸಚಿವ ಜಿ ಪರಮೇಶ್ವರ್ ಹಾಗೂ ಡಿಕೆ ಶಿವಕುಮಾರ್ ಗೆ ನಟ ಕಿಚ್ಚ ಸುದೀಪ್ ಆಮಂತ್ರಣ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos