ಸ್ಯಾಂಡಲ್ವುಡ್ನಲ್ಲಿ ಕ್ರಿಕೆಟ್ ಹಬ್ಬಕ್ಕೆ ಕೌಂಟ್ಡೌನ್!

ಸ್ಯಾಂಡಲ್ವುಡ್ನಲ್ಲಿ ಕ್ರಿಕೆಟ್ ಹಬ್ಬಕ್ಕೆ ಕೌಂಟ್ಡೌನ್!

ಬೆಂಗಳೂರು: ಕಿಚ್ಚ ಸುದೀಪ್ ಐದು ವರ್ಷದ ಹಿಂದೆ ಇಡೀ ಸ್ಯಾಂಡಲ್ವುಡ್ನನ್ನ ಒಂದು ಮಾಡೋಕೆ ಹುಟ್ಟುಹಾಕಿದ್ದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ ಈಗ ನಾಲ್ಕನೇ ಆವೃತ್ತಿಗೆ ಬಂದಿದೆ. ಇದೇ ಡಿಸೆಂಬರ್ 23 24 ಮತ್ತು 25ಕ್ಕೆ ಕೆಸಿಸಿ ಸೀಸನ್ 2 ಕ್ರಿಕೆಟ್ ಹಬ್ಬ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದೆ. ಕೆಸಿಸಿಯಲ್ಲಿ(KCC) ಕನ್ನಡದ ದಿಗ್ಗಜ ಸ್ಟಾರ್ಸ್ ಇದ್ದಾರೆ ಅಂತಾರಷ್ಟ್ರೀಯ ಕ್ರಿಕೆಟ್ ಆಟಗಾರರೂ ಆಡುತ್ತಿದ್ದಾರೆ.

ಒಟ್ಟು ಆರು ತಂಡಗಳು ಕ್ರಿಕೆಟ್ ಹಬ್ಬಕ್ಕೆ ಸಾಕ್ಷಿಯಾಗಲಿದ್ದು, ಕರುನಾಡ ಚಕ್ರವರ್ತಿ ಡಾಕ್ಟರ ಶಿವರಾಜ್ ಕುಮಾರ್ ಸಾರಥ್ಯದಲ್ಲಿ ಈ ಭಾರಿ ರಾಷ್ಟ್ರಕೂಟ ಫ್ಯಾಂಥರ್ಸ್ ತಂಡ ಕಣಕ್ಕಿಳಿಯುತ್ತಿದೆ. ಈ ಭಾರಿ ಈ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಸುರೇಶ್ ರೈನಾ, ಮುರುಳಿ ವಿಜಯ್, ರಾಬಿನ್ ಉತ್ತಪ್ಪ, ಹರ್ಷಲ್ ಗಿಪ್ಸ್, ಎಂ ಬದ್ರಿನಾಥ್, ತಿಲಕರತ್ನೆ ದಿಲ್ಶ್ಯಾನ್ ಆಡುತ್ತಿದ್ದಾರೆ. ಇದರ ಜೊತೆಗೆ ನಟ ಕಿಚ್ಚ ಸುದೀಪ್, ಶಿವಣ್ಣ, ದುನಿಯಾ ವಿಜಯ್, ಡಾಲಿ ಧನಂಜಯ್, ಗಣೇಶ್, ಉಪೇಂದ್ರ ಒಂದೊಂದು ತಂಡ ಸೇರಿಕೊಳ್ಳಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos