ಸಂವಾದದಲ್ಲಿ ಪ್ರಧಾನಿ ಮೋದಿಗೆ ಮುಜುಗರ ತಂದ ಬಿಜೆಪಿ ಕಾರ್ಯಕರ್ತನ ಪ್ರಶ್ನೆ!

ಸಂವಾದದಲ್ಲಿ ಪ್ರಧಾನಿ ಮೋದಿಗೆ ಮುಜುಗರ ತಂದ ಬಿಜೆಪಿ ಕಾರ್ಯಕರ್ತನ ಪ್ರಶ್ನೆ!

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ‘ನಮೋ ಆ್ಯಪ್’ ಮೂಲಕ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಕಾರ್ಯಕರ್ತರೋರ್ವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನೇ ಟೀಕಿಸಿದ್ದು, ಇದರಿಂದ ಮೋದಿ ತೀವ್ರ ಮುಜುಗರಕ್ಕೊಳಗಾದ ಘಟನೆ ನಡೆದಿದೆ.

ಪ್ರಧಾನಿ ಮೋದಿಯವರು ಬುಧವಾರ ಸಂಜೆ ಆ್ಯಪ್ ನಲ್ಲಿ ಉತ್ತರ ತಮಿಳುನಾಡಿನ ಕೆಲವು ಜಿಲ್ಲೆಗಳು ಹಾಗೂ ಪುದುಚೇರಿಯ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಸಂವಾದದ ವೇಳೆ ಎದ್ದು ನಿಂತ ವಿಳ್ಳುಪುರಂ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ನಿರ್ಮಲ್ ಕುಮಾರ್ ಜೈನ್ ಎಂಬವರು, “ಆದಾಯ ತೆರಿಗೆಯಲ್ಲಿ, ಸಾಲ ನೀಡಿಕೆ ಪ್ರಕ್ರಿಯೆಗಳಲ್ಲಿ ತಮಗೆ ವಿನಾಯಿತಿ ಏಕೆ ನೀಡುತ್ತಿಲ್ಲ ಎಂಬುದು ಮಧ್ಯಮವರ್ಗದ ಜನರಿಗೆ ಅರ್ಥವಾಗುತ್ತಿಲ್ಲ. ಈ ವರ್ಗದ ಜನರಿಂದ ತೆರಿಗೆ ವಸೂಲಿ ಮಾಡಲು ಮಾತ್ರ ಕೇಂದ್ರ ಸರಕಾರ ಕಾಳಜಿ ವಹಿಸುತ್ತದೆ. ಇತರ ವಿಷಯಗಳಲ್ಲೂ ಈ ವರ್ಗದ ಬಗ್ಗೆ ಅಷ್ಟೇ ಕಾಳಜಿ ವಹಿಸಿ” ಎಂದು ಖಾರವಾಗಿ ಹೇಳಿದ್ದಾರೆ.

ಇದರಿಂದ ಗಂಭೀರಗೊಂಡ ಮೋದಿ ಅವರು ಆ ಕ್ಷಣದಲ್ಲೇ ನಿರ್ಮಲ್ ಅವರ ಪ್ರತಿಪಾದನೆಯನ್ನು ಅಲ್ಲಗಳೆದು, “ಧನ್ಯವಾದಗಳು ನಿರ್ಮಲ್‌ ಜೀ. ನೀವೊಬ್ಬ ವ್ಯಾಪಾರಿ. ಹೀಗಾಗಿ ಸದಾ ವ್ಯಾಪಾರ-ವಹಿವಾಟಿನ ಬಗ್ಗೆಯೇ ಮಾತನಾಡುತ್ತೀರಿ. ಶ್ರೀಸಾಮಾನ್ಯನ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ” ಎಂದು ಮುಜುಗರಕ್ಕೀಡಾಗಿ ಪ್ರತ್ಯುತ್ತರ ನೀಡಿದ್ದಾರೆ.

ಬಳಿಕ ಮೋದಿ ಅವರು ನಿರ್ಮಲ್ ಅವರ ಬಳಿ ಸಂವಾದ ನಡೆಸಲಿಚ್ಛಿಸದೇ ಪುದುಚೇರಿಯ ಕಾರ್ಯಕರ್ತರ ಬಳಿ ಸಂವಾದ ನಡೆಸಲು ಮುಂದಾದದರು.

ಫ್ರೆಶ್ ನ್ಯೂಸ್

Latest Posts

Featured Videos