ಸಮಸ್ಯೆಗಳ ಆಗರ ಕೆಂಪೇಗೌಡ ಬಸ್ ನಿಲ್ದಾಣ!

ಸಮಸ್ಯೆಗಳ ಆಗರ ಕೆಂಪೇಗೌಡ ಬಸ್ ನಿಲ್ದಾಣ!

ಬೆಂಗಳೂರು, ಜು. 10 : ಪ್ರತಿ ದಿನ ಜನ ಜಂಗುಳಿ ಹಾಗು ಪ್ರಯಾಣಿಕರಿಂದ ಕೂಡಿರುವ ನಗರದ ಪ್ರಮುಖ ಕೇಂದ್ರ ಕೆಂಪೇಗೌಡ ಬಸ್ ನಿಲ್ದಾಣ  ಇಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಪ್ರಯಾಣಿಕರನ್ನ  ಕಾಡುತ್ತಿವೆ .

ಬೆಂಗಳೂರು ನಗರ ಸಾರಿಗೆ ನಿಲ್ದಾಣದಲ್ಲಿ ಯಾವುದೆ ಖಾಸಗಿ ವಾಹನಗಳ ಪ್ರವೇಶ ನಿಶದ್ದ, ಆದರೆ ಖಾಸಗಿ ಬಸ್ ಏಜೆಂಟರುಗಳು ನಿಲ್ದಾಣದ ಅಧಿಕಾರಿಗಳಿಗೆ ಆಮಿಷವೊಡ್ಡಿ ಪ್ರಯಾಣಿಕರನ್ನ ಖಾಸಗಿ ಬಸ್ ಗಳಿಗೆ ಕರೆದೋಯ್ದು ಸರ್ಕಾರಿ ಬಸ್ ಗಳಿಗೆ ನಷ್ಟ ಉಂಟು ಮಾಡುತ್ತಿದ್ದರು ಅಧಿಕಾರಿಗಳು ಗಮನ ಹರಿಸಿಲ್ಲ.

ಬಿ ಎಂ ಟಿಸಿ ಬಸ್ ನಿಲ್ದಾಣದ ಪುಟ್ ಪಾತ್ ಗಳ ಮೇಲೆ ಯಾವುದೆ ಅಂಗಡಿಗಳಿಗೆ ಅಧ್ಧೂರಿ ವ್ಯಾಪಾರ ವಹಿಟು ಮಾಡುತ್ತಾರೆ.

ಮೋಸಕ್ಕೆ ನಂ 1

ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ಮೋಸ, ಹಗಲು ದರೋಡೆಯ ಕೇಂದ್ರ ಸ್ಥಾನ ಇದಕ್ಕೆ ತಾಜಾ ಉದಾಹರಣೆ,  ಒಂದು ಕೇಜಿ ಹಣ್ಣು ಕೊಂಡರೆ ಒಂದು ಕೇಜಿ ಹಣ್ಣಿನ ಬೆಲೆ 100 ರೂ ಇದ್ದರೆ ಇಲ್ಲಿ 200 ರೂ ಭರಿಸಿ ಕೊಂಡರು ನಮಗೆ ತೋರಿಸಿ ತೂಕಹಾಕುವ ಹಣ್ಣಿಗೆ ಬದಾಲಿಗೆ ಬೇರೆ ಉಪಯೋಗಕ್ಕೆ ಬಾರದ ಹಣ್ಣು ಹಾಕಿ ಮೋಸ ಮಾಡುತ್ತಾರೆ. ತೂಕದಲ್ಲಿಯೂ ಒಂದು ಕೆ ಜಿ ಹಣ್ಣಿನ ಬದಲಿಗೆ ಕೇವಲ ಮುಕ್ಕಾಲು ಕೆ ಜಿ ಮಾತ್ರ ಇರುತ್ತೆ.

ಪುಟ್ ಪಾತ್ ಅಂಗಡಿಗ

ಇನ್ನೂ ಇಲ್ಲಿನ ಪುಟ್ ಪಾತ್ ಅಂಗಡಿಗಳಲ್ಲಿ ಯಾವುದೆ ವಸ್ತು ಬೆಲೆ ಕೇಳಿದರೆ ತೆಗೆದುಕೊಳ್ಳೊವರೆಗೆ ಬಿಡುವುದಿಲ್ಲ ಹಿಂದೆ ಬಿದ್ದು ಬಂದು ಕೈ ಹಿಡಿದು ಎಳೆದೋಯ್ದು  ವಸ್ತುಗಳನ್ನ ಖರೀದಿ ಮಾಡೊತನಕ ಬಿಡುವುದಿಲ್ಲ ಗ್ರಾಹಕರು ನೀಡಿದ ಅರ್ಧ ಬೆಲೆಗೆ ವಸ್ತುಗಳನ್ನ ನೀಡಿ ಹಣ ಪಡೆದು ಕಳಿಸುತ್ತಾರೆ. ಒಂದು ರ್ಶಟ್ ಪ್ಯಾಂಟ್ ಹೊಲಿಯಲು 500 ರಿಂದ 600 ರೂಪಾಯಿ ಆಗುತ್ತದೆ ಆದರೆ ಇಲ್ಲಿ ಒಂದು ರ್ಶಟ್ 100 ಪ್ಯಾಂಟ್ ನೂರು ರೂಗೆ  ಸಿಗುತ್ತೆ ಅಂದರೆ ಎಲ್ಲಿಂದ ಬರುತ್ತವೆ ಇವು ಎನ್ನುತ್ತಾರೆ ಬಿಜಾಪುರದ ವೆಂಕಟೇಶ ಬಿರದಾರ.

ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್ ಗಳಲ್ಲಿ ಒಂದು ಊಟಕ್ಕೆ 150 ಇದರ ಜೊತೆಯಲ್ಲಿ ಬೇರೆ ಚಿಕನ್, ಮಟನ್, ತೆಗೆದು ಕೊಂಡರೆ ಪ್ರತ್ಯೇಕ ಬೆಲೆ ನೀಡ ಬೇಕು. ಊಟದ ಜೊತೆಯಲ್ಲಿ ಏನೂ ಬೇಡ ಅಂದರೆ ಸರಿಯಾದ ಉಪಚಾರ ಮಾಡಲ್ಲ.

ಊಟ ಬೆಲೆ ಜಾಸ್ತಿ

ಪುಟ್ ಪಾತ್ ಮೇಲೆ ಇದೇ ಉಟಕ್ಕೆ ಐವತ್ತು ರೂ ಮಾತ್ರ, ಬಿರಿಯಾನಿ 70 ರೂ ಅದೆ ಕೆ ಎಸ್ ಆರ್ ಟಿಸಿ ಹೋಟೆಲ್ ನಲ್ಲಿ 200 ರೂ ಇಂತಹ ಊಟ ಸಾಮಾನ್ಯ ಪ್ರಯಾಣಿಕರ ಕೈಗೆಟುಕುತ್ತಿಲ್ಲ ಎಂದ  ಮಂಡ್ಯ ದಿಂದ ರಾಮನಗರಕ್ಕೆ ಹೋಗಲು ಬಂದಿದ್ದ ರಾಮೇಗೌಡ ಅವರ ಆರೋಪ .

ತಂಪು ಪಾನಿಯಗಳ  ಬೆಲೆ ಜಾಸ್ತಿ

ಒಂದು ಲೀಟರ್ ನೀರಿನ ಬೆಲೆ 20 ರೂ ಆದರೆ ಬಿ ಎಂ ಟಿ ಸಿ ಅಂಗಡಿಗಳಲ್ಲಿ ಬೆಳಿಗ್ಗೆ ಹತ್ತರಿಂದ ಸಂಜೆ ಒಂಭತ್ತರ ವರೆಗೆ ಇಪ್ಪತ್ತು ರೂ ರಾತ್ರಿ ಒಂಭತ್ತರ ನಂತರ ಇಪ್ಪತ್ತೈದು ರೂ  ತಂಪು ಪಾನಿಯಗಳ ಪ್ರತಿ ಬಾಟಲಿ ಐದು ರೂ ಲಾಭ ಇಟ್ಟು ಕೊಂಡೆ ಮಾರೋದು ಕೇಳಿದರೆ ಕುಡಿಯರಿ ಇಲ್ಲ ಅಂದರೆ ನಡೆ ಆಚೆ ಯಾರು ಕರೆದು ನಿನ್ನ ಅಂತ ಮುಲಾಜಿಲ್ಲದೆ ಧಮಕಿ ಹಾಕ್ತಾರೆ ಅಂತ ತುಮಕೂರಿನ ಮಹೇಶ್ ರವರು ಹೇಳಿಕೊಂಡಿದ್ದಾರೆ.

ಶೌಚಾಲಯಗಲ್ಲಿ ಬೆಲೆ

ಬಿಎಂಟಿಸಿ ಮತ್ತು ಕೆ ಎಸ್ ಆರ್ ಟಿಸಿ ಎರಡೂ ನಿಲ್ದಾಣಗಳ ಶೌಚಾಲಯಗಲ್ಲಿ ಸರ್ಕಾರ ನಿಗದಿ ಮಾಡಿರೊ ದರ 5 ರೂ ಆದರೆ ಇಲ್ಲಿ ಪಡೆಯೋದು ಹತ್ತು ರೂ ಅಲ್ಲದೆ ಮೂತ್ರ ವಿಸರ್ಜನೆ ಉಚಿತ ಆದರೂ ಎರಡು ಮೂರು ರೂ ಪಡೆಯುತ್ತಾರೆ ಇದನ್ನ ಪ್ರಶ್ನಿಸಿದರೆ, ನಾವು ಐದು ರೂ ಮಾತ್ರ ಪಡೆಯೋದು  ಎಂದು ಖಾರವಾಗಿಯೆ ಉತ್ತರ ನೀಡಿದ್ದಾರೆ.

ಅಂಗಡಿಯವರು ನಿರ್ದಿಷ್ಟ ಮಾರುಕಟ್ಟೆ ದರ ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಡಿಪೋ ಮ್ಯಾನೇಜರ್ ಅವರಿಗೆ ದೂರು ನೀಡಿ ದೂರವಾಣಿ ಸಂಖ್ಯೆಯನ್ನು ನಮೂದಿಸಲಾಗಿದೆ ಆದರೂ ಯಾವುದೆ ಪ್ರಕರಣಗಳು ಬಂದಿಲ್ಲ. ಹಾಗೊಂದು ವೇಳೆ ಬಂದರೆ ಕ್ರಮ ಕೈಗೊಳ್ಳುವುದಾಗಿ ಕೆಸ್ ಆರ್ ಟಿ ಸಿ ವೃತ್ತ ಸಂಚಾಲಕ ಅಮರೆಗೌಡ ಅವರು ತಿಳಿಸಿದರು.

ಬೆಲೆ

ಫ್ರೆಶ್ ನ್ಯೂಸ್

Latest Posts

Featured Videos