ಮದುವೆ ಬಗ್ಗೆ ಭಾಯ್‍ ಜಾನ್ ತಮಾಷೆ!

ಮದುವೆ ಬಗ್ಗೆ ಭಾಯ್‍ ಜಾನ್ ತಮಾಷೆ!

ಮುಂಬೈ, ಮೇ. 22,ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಮೇ 23ರಂದು ತಮ್ಮ ಮದುವೆ ಬಗ್ಗೆ ಎಲ್ಲರಿಗೂ ಹೇಳುವುದಾಗಿ ತಮಾಷೆ ಮಾಡಿದ್ದಾರೆ.

ಇತ್ತೀಚೆಗೆ ಸಲ್ಮಾನ್ ಖಾನ್ ಪ್ರತಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಮೇ 23ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶ ಹೊರಬರಲಿದೆ. ಜನರು ಫಲಿತಾಂಶದ ಬದಲು ತಮ್ಮ ಮದುವೆ ಬಗ್ಗೆ ಎಷ್ಟು ಆಸಕ್ತಿ ಹೊಂದಿದ್ದಾರೆಂದು ನೋಡಲು ಸಲ್ಮಾನ್ ಈ ರೀತಿ ಉತ್ತರಿಸಿದ್ದಾರೆ. “ನನಗೆ ಮಕ್ಕಳು ಬೇಕು. ಆದರೆ ಮಕ್ಕಳು ಜೊತೆ ತಾಯಿ ಕೂಡ ಬರುತ್ತಾರೆ. ನನಗೆ ತಾಯಿ ಬೇಡ. ಆದರೆ ಮಕ್ಕಳಿಗೆ ತಾಯಿಯ ಅವಶ್ಯಕತೆ ಇದೆ. ಮಕ್ಕಳನ್ನು ನೋಡಿಕೊಳ್ಳಲು ಇಡೀ ಕುಟುಂಬವೇ ಇದೆ” ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಸರೋಗಸಿ ಮೂಲಕ ಮಗು ಪಡೆಯಲಿದ್ದಾರೆ ಎಂಬ ಸುದ್ದಿ ಬಾಲಿವುಡ್‍ನಲ್ಲಿ ಹರಿದಾಡುತ್ತಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos