ಸಲಾರ್‌ ಅದ್ದೂರಿಯಾಗಿ ತೆರೆಕಂಡಿದೆ.!!

ಸಲಾರ್‌ ಅದ್ದೂರಿಯಾಗಿ ತೆರೆಕಂಡಿದೆ.!!

ಬೆಂಗಳೂರು: ಪ್ರಭಾಸ್‌ ಎಂದರೆ ಯಾರಿಗೆತ್ತಾನೇ ಇಷ್ಟವಿಲ್ಲಾ ಹೇಳಿ. ಪ್ರಭಾಸ್‌ ತೆಲುಗು ಚಿತ್ರರಂಗದಲ್ಲಿ ಟಾಪ್‌ ನಟರಲ್ಲಿ ಒಬ್ಬರು. ಇವರಿಗೆ ಇಡೀ ದೇಶದ್ಯಾಂತ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ಎಂಬ ಕಾರಣಕ್ಕೆ ‘ಸಲಾರ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹೊಂಬಾಳೆ ಫಿಲ್ಮ್ಸ್ ಅದ್ದೂರಿ ಬಜೆಟ್​​ನಲ್ಲಿ ನಿರ್ಮಾಣ ಮಾಡಿದ ಈ ಸಿನಿಮಾ ಇಂದು ದೇಶದ್ಯಾಂತ ಅದ್ದೂರಿಯಾಗಿ ರಿಲೀಸ್ ಆಗಿದೆ.  ಈ ಚಿತ್ರ ಐದು ಭಾಷೆಗಳಲ್ಲಿ  ರಿಲೀಸ್ ಆಗಿದೆ. ಟ್ರೇಲರ್ ಮೂಲಕ ನಿರೀಕ್ಷೆ ಸೃಷ್ಟಿ ಮಾಡಿತ್ತು.

ದೇವ ಒಂದು ಮೈನಿಂಗ್​ನಲ್ಲಿ ಕೆಲಸ ಮಾಡುವ ಮೆಕಾನಿಕ್. ಆತನಿಗೆ ತಾನಾಯಿತು ತನ್ನ ತಾಯಿ ಆಯಿತು ಎಂಬುದಷ್ಟೇ. ಇಬ್ಬರು ಮಾಡುವ ಕೆಲಸವನ್ನು ಒಬ್ಬನೇ ಮಾಡುವಷ್ಟು ತಾಕತ್ತಿರುವ ವ್ಯಕ್ತಿ. ಆದರೂ, ತಲೆಬಗ್ಗಿಸಿ ನಡೆಯುತ್ತಾನೆ. ತಡವಾಗಿ ಬಂದರೆ ಬಯ್ಯುವ ಅಮ್ಮನ ಮಾತಿಗೆ ಚಿಕ್ಕ ಮಗುವಿನಂತೆ ಭಯ ಬೀಳುತ್ತಾನೆ. ಆತ ಯಾರ ಮೇಲೂ ಕೈ ಮಾಡುವವನಲ್ಲ. ಆದರೆ, ಆತ ಎಲ್ಲರೂ ಅಂದುಕೊಂಡಂತಲ್ಲ. ಆತನಿಗೆ ಒಂದು ಕರಾಳ ಇತಿಹಾಸ ಇದೆ. ಒಳ್ಳೆಯ ಗೆಳೆಯನಿದ್ದಾನೆ.

ಪ್ರಭಾಸ್ ಅವರಿಂದ ಅಭಿಮಾನಿಗಳು ಮಾಸ್​​ನ ಹೆಚ್ಚು ಇಷ್ಟಪಡುತ್ತಾರೆ. ಈ ಬಾರಿ ಮಾಸ್ ದ್ವಿಗುಣವಾಗಿದೆ. ಎರಡು ಶೇಡ್​ನಲ್ಲಿ ಪ್ರಭಾಸ್ ಗಮನ ಸೆಳೆದಿದ್ದಾರೆ. ಸೈಲೆಂಟ್ ಆಗಿರುವಾಗ ಪ್ರಭಾಸ್ ಕಣ್ಣುಗಳು ಮಾತನಾಡುತ್ತವೆ. ವೈಲೆಂಟ್ ಆದಾಗ ಅವರ ಕೈಯಲ್ಲಿರುವ ಕತ್ತಿ ಶಬ್ದ ಮಾಡುತ್ತದೆ. ಸಿನಿಮಾ ಉದ್ದಕ್ಕೂ ಪ್ರಭಾಸ್ ಪಾತ್ರ ಹೈಲೈಟ್ ಆಗಿದ್ದಾರೆ. ಕಾಟೇರ ದೇವರ ಎದುರಿನ ಫೈಟ್​ನಲ್ಲಿ ಅಭಿಮಾನಿಗಳಿಗೆ ಅಕ್ಷರಶಃ ಮೈ ರೋಮ ಎದ್ದು ನಿಲ್ಲುವಂತೆ ಮಾಡುತ್ತಾರೆ ಪ್ರಭಾಸ್.

ಪ್ರಭಾಸ್ ರೀತಿಯೇ ಹಲವು ಪಾತ್ರಗಳು ಹೈಲೈಟ್ ಆಗಿವೆ. ಪೃಥ್ವಿರಾಜ್​ ಸುಕುಮಾರನ್ ಅವರು ವರದ ಆಗಿ, ದೇವನ ಗೆಳೆಯನಾಗಿ ಮಿಂಚಿದ್ದಾರೆ. ಅವರ ಪಾತ್ರ ಕೂಡ ಸಾಕಷ್ಟು ತೂಕ ಹೊಂದಿದೆ. ಅವರು ಪಾತ್ರವನ್ನು ಜೀವಿಸಿದ್ದಾರೆ. ಶ್ರುತಿ ಹಾಸನ್ ಅಲ್ಲಲ್ಲಿ ಕಾಣಿಸಿಕೊಂಡು ಮರೆಯಾಗುತ್ತಾರೆ. ಜಗಪತಿ ಬಾಬು, ಟಿನು ಆನಂದ್, ಈಶ್ವರಿ ರಾವ್, ಶ್ರೀ ರೆಡ್ಡಿ, ರಾಮಚಂದ್ರ ರಾಜು, ಮಧು ಗುರುಸ್ವಾಮಿ, ನವೀನ್ ಶಂಕರ್, ಪ್ರಮೋದ್ ಮೊದಲಾದವರ ಪಾತ್ರಗಳು ತಮ್ಮದೇ ಆದ ತೂಕ ಹೊಂದಿವೆ.

 

ಫ್ರೆಶ್ ನ್ಯೂಸ್

Latest Posts

Featured Videos