ಲಂಗ ದಾವಣಿಯಲ್ಲಿ ‘ಸಿಂಗ’ ಸಖಿ

ಲಂಗ ದಾವಣಿಯಲ್ಲಿ ‘ಸಿಂಗ’ ಸಖಿ

ಬೆಂಗಳೂರು, ಜು. 16 : ಚಿರಂಜೀವಿ ಸರ್ಜಾ ಸಿನಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗುವ ಭರವಸೆ ಬಿತ್ತಿರೋ ಚಿತ್ರ ಸಿಂಗ. ವಿಜಯ್ ಕಿರಣ್ ನಿರ್ದೇಶನ, ಉದಯ್ ಮೆಹ್ತಾ ನಿರ್ಮಾಣದ ಸಿಂಗ ಇದೇ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಅದಾಗಲೇ ಪ್ರೇಕ್ಷಕ ವಲಯದಲ್ಲಿ ನೋಡಲೇ ಬೇಕೆಂಬಂಥಾ ತಹ ತಹವನ್ನು ಹುಟ್ಟು ಹಾಕಿರೋ ಈ ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಹೊಸತನದ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ತಾಕಲು ಅಣಿಯಾಗಿದ್ದಾರೆ. ಅವರಿಗಿಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿದ್ದಾರೆ. ಅದಿತಿ ಪ್ರಭುದೇವ ಕಿರುತೆರೆ ಧಾರಾವಾಹಿಯ ಮೂಲಕವೇ ನಟಿಯಾಗಿ ಪರಿಚಯವಾಗಿ ಇದೀಗ ಹಿರಿತೆರೆಯಲ್ಲಿ ನಾಯಕಿಯಾಗಿ ಮಿಂಚುತ್ತಿರುವವರು. ಅದಾಗಲೇ ಅವರು ನಾಯಕಿಯಾಗಿರೋ ಮೂರ್ನಾಲಕ್ಕು ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಲು ಸರದಿಯಲ್ಲಿ ನಿಂತಿವೆ. ಏಕತಾನತೆಯನ್ನು ಮೀರಿಕೊಂಡು ಥರ ಥರದ ಪಾತ್ರಗಳಲ್ಲಿ ನಟಿಸೋ ಆಸೆ ಹೊಂದಿರೋ ಅದಿತಿಗೆ ಈವರೆಗೂ ಅಂಥಾದ್ದೇ ಪಾತ್ರಗಳು ಸಿಕ್ಕಿವೆ. ಸಿಂಗ ಚಿತ್ರದಲ್ಲಿ ಅವರಿಗೆ ಸಿಕ್ಕಿರೋ ಪಾತ್ರವೂ ಅಷ್ಟೇ ಭಿನ್ನವಾದದ್ದು.

ಫ್ರೆಶ್ ನ್ಯೂಸ್

Latest Posts

Featured Videos