ಜೀವಾವಧಿ ಶಿಕ್ಷೆಗೊಳಗಾಗಿದ್ದ ಸಜ್ಜನ್​ ಶರಣಾಗತಿಗೆ ಕಾಲಾವಕಾಶ ನೀಡಲು ಹೈಕೋರ್ಟ್​ ನಕಾರ

ಜೀವಾವಧಿ ಶಿಕ್ಷೆಗೊಳಗಾಗಿದ್ದ ಸಜ್ಜನ್​ ಶರಣಾಗತಿಗೆ ಕಾಲಾವಕಾಶ ನೀಡಲು ಹೈಕೋರ್ಟ್​ ನಕಾರ

ನವದೆಹಲಿ: ಸಿಖ್​ ವಿರೋಧಿ ದಂಗೆಯ ಪ್ರಮುಖ ಆರೋಪಿ, ಸದ್ಯ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್​ ಕುಮಾರ್​ ಶರಣಾಗತಿಯಾಗಲು ಕಾಲಾವಕಾಶ ಬೇಕೆಂಬ ಅರ್ಜಿಯನ್ನು ದೆಹಲಿ ಹೈ ಕೋರ್ಟ್​ ಇಂದು ವಜಾಗೊಳಿಸಿದೆ.

 

ಸಜ್ಜನ್ ಗೆ  ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿತ್ತು. ಈ ಕುರಿತು ಕಾನೂನು  ಹೋರಾಟ ನಡೆಸುತ್ತಿರುವ ಸಜ್ಜನ್‍, ಶರಣಾಗತಿಗೆ 30 ದಿನಗಳ  ಕಾಲಾವಕಾಶಬೇಕೆಂದು ಕೋರ್ಟ್​ನಲ್ಲಿ ಮನವಿ ಸಲ್ಲಿಸಿದ್ದರು.  ಆದರೆ  ಕೋರಿಕೆಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ ಎನ್ನಲಾಗಿದೆ.

ನ್ಯಾಯಾಧೀಶರಾದ ಎಸ್. ಮುರುಳಿಧರ ಹಾಗೂ ವಿನೋದ್​ ಗೊಯೆಲ್​ ಅವರಿದ್ದ ಪೀಠ  ಸಜ್ಜನ್​ರ ಕೋರಿಕೆಗೆ ಅವಕಾಶ ನೀಡಲಾಗದು ಎಂದಿದ್ದಾರೆ. ಡಿಸೆಂಬರ್​ 17ರಂದು ಈ ಇಬ್ಬರೂ ನ್ಯಾಯಮೂರ್ತಿಗಳ ಪೀಠ ಸಜ್ಜನ್​ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಈಗ ಸಜ್ಜನ್​ರ ಅರ್ಜಿ ತಿರಸ್ಕೃತಗೊಂಡಿರುವುದರಿಂದ, ಶೀಘ್ರದಲ್ಲಿಯೇ ಸಜ್ಜನ್‍ ರನ್ನು ಬಂಧಿಸುವ ಸಾಧ್ಯತೆ ಇದೆ.

ಫ್ರೆಶ್ ನ್ಯೂಸ್

Latest Posts

Featured Videos