‘ಸೈರಾ’ ಸೆಟ್ ನಲ್ಲಿ ಕಿಚ್ಚ ಸುದೀಪ್

‘ಸೈರಾ’ ಸೆಟ್ ನಲ್ಲಿ ಕಿಚ್ಚ ಸುದೀಪ್

ಮಾ. 16, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡದ ನಟ ಕಿಚ್ಚ ಸುದೀಪ್ ಅವರಿಗರ ಚಿತ್ರರಂಗದಲ್ಲಿ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿವೆ. ಹೌದು, ಕಿಚ್ಚ ಅವರಿಗೆ ಮತ್ತೊಂದು ದೊಡ್ಡ ಅವಕಾಶವನ್ನು ಪಡೆದುಕೊಂಡಿದ್ದಾರೆ. ನಟ ಅಮಿತಾಭ್ ಜೊತೆಗೆ ಸಿನಿಮಾ ಮಾಡುವ ಗೋಲ್ಡನ್ ಚಾನ್ಸ್ ಅವರಿಗೆ ಸಿಕ್ಕಿದೆ.

ಟಾಲಿವುಡ್ ನ ‘ಸೈರಾ’ ಚಿತ್ರದಲ್ಲಿ ಅಮಿತಾಭ್ ಹಾಗೂ ಸುದೀಪ್ 2 ನಟಿಸುತ್ತಿದ್ದಾರೆ. ಈ 2 ನಟರು ಈಗ ಚಿತ್ರೀಕರಣದ ಸೆಟ್ ನಲ್ಲಿ ಎದುರಾಗಿದ್ದಾರೆ. ಬಚ್ಚನ್ ಜೊತೆಗೆ ಸುದೀಪ್ ಫೋಟೋ ತಗೆದುಕೊಂಡಿದ್ದಾರೆ. ಬಚ್ಚನ್ ಜೊತೆಗಿನ ಫೋಟೋವನ್ನು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಹತ್ತು ವರ್ಷದ ಹಿಂದೆ ‘ರಣ್’ ಚಿತ್ರದಲ್ಲಿ ನಟಿಸಿದ್ದೆ. ಅದರ ನಂತರ ಮತ್ತೆ ಲೆಜೇಂಡ್ ನಟನ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ ಎಂದು ಬಚ್ಚನ್ ಗುಣಗಾನ ಮಾಡಿದ್ದಾರೆ.

‘ಸೈರಾ’ ಮೆಗಾಸ್ಟಾರ್ ಚಿರಂಜೀವಿ ನಟನೆಯ 151ನೇ ಚಿತ್ರವಾಗಿದೆ. ಈ ಸಿನಿಮಾವನ್ನು ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ಈ ವರ್ಷದ ದೊಡ್ಡ ಪ್ರಾಜೆಕ್ಟ್ ಇದಾಗಿದೆ. ಅವುಕು ರಾಜ್ಯದ ರಾಜನಾಗಿ ಕಿಚ್ಚ ಕಂಗೊಳ್ಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos