ಸೀರೆ, ಗಣೇಶ ವಿತರಿಸಿದ ಸಚಿವ ಭೈರತಿ

ಸೀರೆ, ಗಣೇಶ ವಿತರಿಸಿದ ಸಚಿವ ಭೈರತಿ

 

ಕೆ.ಆರ್.ಪುರ:ಗೌರಿ ಗಣೇಶ ಹಬ್ಬದ ಅಂಗವಾಗಿ ಕ್ಷೇತ್ರದ ಮಹಿಳೆಯರಿಗೆ ಮನೆಯಲ್ಲಿ ಪೂಜಿಸಲು ಪರಿಸರ ಸ್ನೇಹಿ ಗಣೇಶ ಹಾಗೂ ಸೀರೆ ಮತ್ತು ಅರಿಶಿನ, ಕುಂಕುಮ ನೀಡುವ ಮೂಲಕ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಶುಭಾಶಯ ಕೋರಿದರು.
ಗೌರಿ ಗಣೇಶ ಚತುರ್ಥಿ ಅಂಗವಾಗಿ ಕ್ಷೇತ್ರದ ಎಲ್ಲಾ ನಾಗರೀಕರು ಮನೆಯಲ್ಲಿಯೇ ಇದ್ದು ಗೌರಿ ಗಣೇಶ ಹಬ್ಬವನ್ನು ಆಚರಿಸುವಂತೆ ಸಲಹೆ ನೀಡಿದರು.
ಹಿಂದೂ ಸಂಸ್ಕೃತಿಯAತೆ ಗೌರಿ ಗಣೇಶ ಹಬ್ಬಕ್ಕೆ ಹೆಣ್ಣುಮಕ್ಕಳಿಗೆ ತವರು ಮನೆಯಲ್ಲಿ ಸೀರೆ, ಅರಿಶಿನ ಕುಂಕುಮ ನೀಡುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ದತಿ ಅದನ್ನು ನಾವೆಲ್ಲಾ ಉಳಿಸಿಕೊಂಡು ಹೋಗಬೇಕು ಎಂದರು.
ಈ ಹಬ್ಬಗಳ ಆಚರಣೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪಾಲಿಸಿಕೊಂಡು ಹೋಗಲು ಹಿರಿಯರು ನಡೆಸಿಕೊಂಡು ಬಂದಿರುವುದು ಕಾರ್ಯಗತವಾಗಬೇಕೆಂದು ಹೇಳಿದರು. ಇದೆ ಸಮಯದಲ್ಲಿ ಪಾಲಿಕೆ ಮಾಜಿ ನಾಮನಿರ್ದೇಶನ ಸದಸ್ಯ ಅಂತೋಣಿಸ್ವಾಮಿ ಮಾತನಾಡಿ ಕೆ.ಆರ್.ಪುರ ವಾರ್ಡ್ ಎಲ್ಲಾ ಮಹಿಳೆಯರಿಗೆ ಗಣೇಶನ ಮೂರ್ತಿ, ಸೀರೆ ಹಾಗೂ ಹರಿಶಿನ ಕುಂಕುಮ ನೀಡಿ ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ಕೋರಿದರು
ಈ ಸಂದರ್ಭದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅದ್ಯಕ್ಷ ಸಚ್ಚಿದಾನಂದ ಮೂರ್ತಿ, ವಾರ್ಡ್ ಅದ್ಯಕ್ಷ ಶಿವಪ್ಪ, ಮುಖಂಡರಾದ ಸಿದ್ದಲಿಂಗಯ್ಯ, ಪಟಾಕಿ ರವಿ, ಶ್ರೀರಾಮುಲು, ಕೆ.ಪಿ ಕೃಷ್ಣ, ನಿರಂಜನ್ ಸೇರಿದಂತೆ ಇತರರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos