ಹಸುವಿನ ಸಗಣಿಯಿಂದ ಪೇಪರ್ ತಯಾರಿ; ಕೈತುಂಬ ಆದಾಯ!

ಹಸುವಿನ ಸಗಣಿಯಿಂದ ಪೇಪರ್ ತಯಾರಿ; ಕೈತುಂಬ ಆದಾಯ!

ಬೆಂಗಳೂರು, ಏ. 27, ನ್ಯೂಸ್ ಎಕ್ಸ್ ಪ್ರೆಸ್:   ಹಸುವಿನ ಸಗಣಿ ಸಾಕಷ್ಟು ಪ್ರಯೋಜನಕಾರಿ. ಹಸುವಿನ ಸಗಣಿಯಿಂದ ಕೈತುಂಬ ಆದಾಯ ಗಳಿಸಬಹುದು. ಹಸುವಿನ ಸಗಣಿಯಿಂದ ಪೇಪರ್ ತಯಾರಿ ವ್ಯವಹಾರ ಶುರು ಮಾಡಬಹುದು. ಸರ್ಕಾರ ಗೊಬ್ಬರದ ಕಾಗದ ತಯಾರಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಎಂಎಸ್ಎಂಇ ಸಚಿವಾಲಯ ದೇಶದಾದ್ಯಂತ ಗೊಬ್ಬರದ ಕಾಗದ ತಯಾರಿ ಪ್ಲಾಂಟ್ ಸ್ಥಾಪಿಸುವ ಯೋಚನೆಯಲ್ಲಿದೆ. ಕಾಗದ ತಯಾರಿಕೆಗೆ ಗೊಬ್ಬರದ ಶೇಕಡಾ 7ರಷ್ಟು ಪ್ರಮಾಣವನ್ನು ಮಾತ್ರ ಬಳಸಲಾಗುತ್ತದೆ. ಉಳಿದ ಶೇಕಡಾ 93ರಷ್ಟನ್ನು ವೆಜಿಟೇಬಲ್ ಡೈಗೆ ನೀವು ಬಳಸಬಹುದು. ಇದು ಪರಿಸರ ಸ್ನೇಹಿಯಾಗಿರುವುದ್ರಿಂದ ಬೇಡಿಕೆ ಹೆಚ್ಚು. ಹಾಗೆ ರಫ್ತಿಗೂ ಅವಕಾಶವಿದೆ. ಸಗಣಿಯನ್ನು ರೈತರಿಂದ ಕೆ.ಜಿ.ಗೆ 5 ರೂಪಾಯಿಯಂತೆ ಖರೀದಿ ಮಾಡಬೇಕಾಗುತ್ತದೆ. ಇದು ರೈತರಿಗೂ ಅನುಕೂಲ ಮಾಡಿಕೊಡುತ್ತದೆ. ದಿನಕ್ಕೆ ರೈತರು ಸುಮಾರು 50 ರೂಪಾಯಿ ಹೆಚ್ಚುವರಿಯಾಗಿ ಗಳಿಸಲು ನೆರವಾಗುತ್ತದೆ. ಸರ್ಕಾರ ಇದಕ್ಕೆ ನೆರವಾಗಲಿದೆ. ಗೊಬ್ಬರದ ಕಾಗದ ಪ್ಲಾಂಟ್‌ ಸ್ಥಾಪಿಸಲು 15 ಲಕ್ಷ ರೂಪಾಯಿ ಖರ್ಚಾಗಲಿದೆ. ಒಂದು ಪ್ಲಾಂಟ್ ನಲ್ಲಿ ಒಂದು ತಿಂಗಳಿಗೆ 1 ಲಕ್ಷ ಕಾಗದದ ಬ್ಯಾಗ್ ತಯಾರಿಸಬಹುದು.

ಫ್ರೆಶ್ ನ್ಯೂಸ್

Latest Posts

Featured Videos