ಸಾಧು ಕೋಕಿಲ ಗುರುಗಳಂತೆ ಬಾಲಸುಬ್ರಮಣ್ಯಂ

ಸಾಧು ಕೋಕಿಲ ಗುರುಗಳಂತೆ ಬಾಲಸುಬ್ರಮಣ್ಯಂ

ಬೆಂಗಳೂರು,ಜೂ.18: ಇಲ್ಲಿನ ನಾಗರಭಾವಿ ವೃತ್ತದ ಬಳಿ ಹೊಸದಾಗಿ ನಿರ್ಮಾಣಗೊಂಡಿರುವ ಈ ಸ್ಟುಡಿಯೋ ಅನ್ನು ಇತ್ತೀಚೆಗೆ ಖ್ಯಾತ ಗಾಯಕ ಎಸ್‌ ಬಿ ಬಾಲಸುಬ್ರಮಣ್ಯಂ ಉದ್ಘಾಟಿಸಿದರು. ಈ ಸ್ಟುಡಿಯೋ ಹೆಸರು ‘ಲೂಪ್‌ ಎಂಟರ್‌ಟೈನ್‌ಮೆಂಟ್‌ ಸ್ಟುಡಿಯೋ’. ಹಲವು ರೀತಿಯ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಲೂಪ್‌ ಸ್ಟುಡಿಯೋದ ಸಾರಥಿಗಳಾಗಿ ಸಾಧು ಕೋಕಿಲ ಪುತ್ರ ಸುರಾಗ್‌ ಹಾಗೂ ಸಂಕಲನಕಾರ ಜೋನಿ ಹರ್ಷ ಇದ್ದಾರೆ.

ನಿರ್ದೇಶಕ, ಸಂಗೀತ ನಿರ್ದೇಶಕ ಚಿತ್ರೋದ್ಯಮ ನಮ್ಮ ಸ್ಟುಡಿಯೋ ಅನ್ನು ಬಳಸಿಕೊಳ್ಳುತ್ತದೆಂಬ ನಂಬಿಕೆ ಇದೆ. ಸಂಗೀತ ಕ್ಷೇತ್ರದಲ್ಲಿ ಸಾಧು ಕೋಕಿಲ ಅವರಿಗೆ ವಿಶೇಷವಾದ ಪ್ರತಿಭೆ ಇದೆ. ಅವರ ಪ್ರತಿಭೆಯಿಂದಲೇ ಹಾಡುಗಳು ಹಿಟ್‌ ಆಗಿವೆ. ಯಾವುದೇ ಗಾಯಕ ಅಥವಾ ಗಾಯಕಿಗೆ ಹಾಡುವ ಅವಕಾಶ ಸಿಗುವುದು ಸಂಗೀತ ನಿರ್ದೇಶಕರಿಂದ. ಸಾಧು ಅವರು ಸಂಗೀತ ಮಾಡಿರುವ ಹಲವು ಹಾಡುಗಳಿಗೆ ಧ್ವನಿಯಾಗಿದ್ದೇನೆ. ಹೀಗೆ ಹಾಡುವ ಅವಕಾಶ ನೀಡುವ ಪ್ರತಿಯೊಬ್ಬ ಸಂಗೀತ ನಿರ್ದೇಶಕನೂ ಗಾಯಕರ ಪಾಲಿಗೆ ಗುರುವೇ. ಹಾಗೆ ನನ್ನ ಪಾಲಿಗೆ ಸಾಧು ಕೋಕಿಲ ಗುರುಗಳಂತೆ ಎಂದು ಹೇಳುವ ಮೂಲಕ ಹೊಸ ಸ್ಟುಡಿಯೋಗೆ ಚಾಲನೆ ಕೊಟ್ಟರು ಎಸ್‌ ಬಿ ಬಾಲಸುಬ್ರಮಣ್ಯಂ.

 

ಫ್ರೆಶ್ ನ್ಯೂಸ್

Latest Posts

Featured Videos