ಸದ್ದಿಲ್ಲದೆ 142 ಕ್ರಿಮಿನಲ್ ಕೇಸ್ ವಾಪಸ್ ಪಡೆದ ಮೈತ್ರಿ ಸರ್ಕಾರ

ಸದ್ದಿಲ್ಲದೆ 142 ಕ್ರಿಮಿನಲ್ ಕೇಸ್ ವಾಪಸ್ ಪಡೆದ ಮೈತ್ರಿ ಸರ್ಕಾರ

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಸದ್ದಿಲ್ಲದೆ 142 ಕ್ರಿಮಿನಲ್ ಕೇಸುಗಳನ್ನು ಮೈತ್ರಿ ಸರ್ಕಾರವು ಹಿಂತೆಗೆದುಕೊಂಡಿದೆ.

21 ಜಿಲ್ಲೆಗಳಲ್ಲಿ ದಾಖಲಾಗಿರುವ ಕೋಮು ಸಂಘರ್ಷ ಸೇರಿದಂತೆ ವಿವಿಧ ಸ್ವರೂಪದ ಒಟ್ಟು 142 ಪ್ರಕರಣಗಳನ್ನು ಬೇಷರತ್ತಾಗಿ ರದ್ದುಪಡಿಸಿದೆ. ಇದರಲ್ಲಿ ಗಂಭೀರ ಸ್ವರೂಪದ ಪ್ರಕರಣಗಳೂ ಸೇರಿದ್ದು ವಾಪಸ್ ಪಡೆಯಲು ಯಾವುದೇ ನಿರ್ದಿಷ್ಟ ಕಾರಣಗಳನ್ನೂ ನೀಡಿಲ್ಲ.

ಮಂಗಳೂರು ತಾಲೂಕಿನ ಉಳಾಯಿಬೆಟ್ಟಿನಲ್ಲಿ ಕೋಮುವಾದಿಗಳು ನಡೆಸಿದ ಮಾರಕ ದಾಳಿ, ದರೋಡೆ, ಹಲ್ಲೆ ಕೊಲೆ ಪ್ರಯತ್ನವೂ ಕೂಡ ಸೇರಿದೆ.ಸಾಮಾನ್ಯವಾಗಿ 2ಪಕ್ಷದವರ ಒಪ್ಪಿಗೆ ಇದ್ದಲ್ಲಿ ಮಾತ್ರ ಇಂತಹ ಪ್ರಕರಣಗಳನ್ನು ವಜಾ ಮಾಡಲಾಗುತ್ತದೆ.

ಆದರೆ ಇಂತಹ ಯಾವುದೇ ಬೆಳವಣಿಗೆ ಇಲ್ಲದಿದ್ದರೂ ರಾಜ್ಯ ಸರ್ಕಾರ ಸ್ವಯಂ ನಿರ್ಧಾರ ತೆಗೆದುಕೊಂಡಿದೆ.

ಹೆಚ್ಚಿನವು ಸೆಷನ್ಸ್ ಹಾಗೂ ಜೆಎಂಎಫ್ಸಿ ನ್ಯಾಯಾಲಯಗಳಲ್ಲಿ ವಿಚಾರಣೆಯ ವಿವಿಧ ಹಂತಗಳಲ್ಲಿದ್ದವು. 2018 ಅಕ್ಟೋಬರ್ ನಿಂದ ಈ ವರ್ಷದ ಜನವರಿವರೆಗೆ ವಿವಿಧ ಹಂತಗಳಲ್ಲಿ ಸರ್ಕಾರ ಇವುಗಳನ್ನು ವಾಪಸ್ ಪಡೆದಿರುವುದನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಾಸಿಕ್ಯೂಶನ್ ಇಲಾಖೆ ನಿರ್ದೇಶಕರು ನೀಡಿರುವ ದಾಖಲೆಗಳ ಮೂಲಕ ಬಹಿರಂಗಗೊಂಡಿದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ.

ಫ್ರೆಶ್ ನ್ಯೂಸ್

Latest Posts

Featured Videos