ಸಚಿವ ಮಾಧುಸ್ವಾಮಿ ವಿರುದ್ದ ಸಿಡಿದ ಕುರುಬ ಸಮುದಾಯ

ಸಚಿವ ಮಾಧುಸ್ವಾಮಿ ವಿರುದ್ದ ಸಿಡಿದ ಕುರುಬ ಸಮುದಾಯ

ದೊಡ್ಡಬಳ್ಳಾಪುರ, ನ. 21: ಕುರುಬ ಸಮುದಾಯದ ಸ್ವಾಮೀಜಿ ಶ್ರೀ ಈಶ್ವರನಂದಪುರಿ ಸ್ವಾಮೀಜಿಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಕ್ಷಮೆ ಕೇಳಬೇಕು ಹಾಗೂ ಘಟನೆಯ ನೈತಿಕ ಹೊಣೆ ಹೊತ್ತು ಸಚಿವ ದೊಡ್ಡಬಳ್ಳಾಪುರ ನಗರದ ಕನಕ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಆಗ್ರಹಿಸಿದ್ದಾರೆ.

ಹುಳಿಯಾರು ಪಟ್ಟಣದ ಪೆಟ್ರೋಲ್ ಬಂಕ್ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಚರ್ಚೆ ನಡೆಸಲು ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಪೊಲೀಸರು ಶಾಂತಿಸಭೆಯಲ್ಲಿ ಕಾಗಿನೆಲೆ ಶ್ರೀಗಳ ವಿರುದ್ದ ರಾಜ್ಯದ ಕಾನೂನು ಮಂತ್ರಿಯಾಗಿದ್ದು, ಮಾಧುಸ್ವಾಮಿ ಅಗೌರವವಾಗಿ ಮಾತಾಡಿರುವುದು ಖಂಡನೀಯ. ಸಚಿವರಾಗಿ ಎಲ್ಲಾ ಸಮುದಾಯದವರನ್ನ ಒಂದಾಗಿ ಕೊಂಡಯ್ಯ ಬೇಕಿದೆ, ತಮ್ಮ ತಪ್ಪನ್ನ ತಿದ್ದಿಕೊಂಡು ಶ್ರೀಗಳಿಗೆ ಬಹಿರಂಗ ಕ್ಷಮೆಯಾಚಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದರು.

ಘಟನೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಕ್ಷಮೆ ಕೇಳಿದರು ಸಚಿವರು ಕ್ಷಮೆ ಕೇಳದಿರುವುದು ಅವರ ದರ್ಪವನ್ನು ತೋರುತ್ತದೆ. ಇದು ರಾಜ್ಯದ ಶಾಂತಿ ವಿಚಾರದಲ್ಲಿ ಸಚಿವರಿಗೆ ಗೌರವ ತರುವುದಿಲ್ಲವೆಂದು ಬೇಸರ ವ್ಯಕ್ತ ಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಕುರುಬ ಸಂಘದ ಪದಾಧಿಕಾರಿಗಳು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos