ಸಾಲ ಮನ್ನಾ: ಇಲ್ಲಿಯವರೆಗೆ .7417 ಕೋಟಿ ಬಿಡುಗಡೆ

ಸಾಲ ಮನ್ನಾ: ಇಲ್ಲಿಯವರೆಗೆ .7417 ಕೋಟಿ ಬಿಡುಗಡೆ

ಬೆಂಗಳೂರು, ಮೇ, 7. ನ್ಯೂಸ್ ಎಕ್ಸ್ ಪ್ರೆಸ್: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಕೃಷಿ ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್ ನಲ್ಲಿ ಸಾಲ ಪಡೆದವರ ಪೈಕಿ ಇಲ್ಲಿಯವರೆಗೆ 15.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದ್ದು, ಒಟ್ಟು 7417 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಇಲ್ಲಿಯವರೆಗೆ ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್ ಗಳಲ್ಲಿ ಸಾಲ ಪಡೆದ 15.5 ಲಕ್ಷ ರೈತರ ಸಾಲದ ಬಾಬ್ತು 7417 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಾಣಿಜ್ಯ ಬ್ಯಾಂಕ್ ಗಳಲ್ಲಿ ಸಾಲ ಪಡೆದ ರೈತರ ಪೈಕಿ 7.49 ಲಕ್ಷ ರೈತರ 3929 ಕೋಟಿ ರೂ ಗಳನ್ನು ಬ್ಯಾಂಕುಗಳಿಗೆ ಈವರೆಗೆ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಸಹಕಾರ ಬ್ಯಾಂಕ್ಗಳ 8.1 ಲಕ್ಷ ರೈತರ ಸಾಲದ ಮೊತ್ತ 3488 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಏಪ್ರಿಲ್ ತಿಂಗಳವರೆಗೆ ಬಿಡುಗಡೆಯಾಗಿರುವ ಮೊತ್ತ ಇದಾಗಿದೆ. ಹಂತ ಹಂತವಾಗಿ ರೈತರ ಸಾಲವನ್ನು ಸರ್ಕಾರವು ಬಿಡುಗಡೆ ಮಾಡುತ್ತಿದೆ. ಒಟ್ಟು 44 ಸಾವಿರ ಕೋಟಿ ರೂ. ನಷ್ಟುಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos