ವಿಜ್ಞಾನ ಪ್ರಯೋಗ ಶಾಲೆಗೆ ಪಾಲಿಕೆ ಸದಸ್ಯ ಜಯಪ್ರಕಾಶ್ ಚಾಲನೆ

ವಿಜ್ಞಾನ ಪ್ರಯೋಗ ಶಾಲೆಗೆ ಪಾಲಿಕೆ ಸದಸ್ಯ ಜಯಪ್ರಕಾಶ್ ಚಾಲನೆ

ಕೆ.ಆರ್.ಪುರ, ಡಿ. 11: ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಯಾವುದೇ ರೀತಿ ಕೊರತೆ ಆಗದಂತೆ ಸರ್ಕಾರಿ ಶಾಲಾ ಮಕ್ಕಳು ವ್ಯಾಸಂಗ ಮಾಡಲು ಸೂಕ್ತ ಸಲಕರಣೆಗಳು ಒದಗಿಸಲಾಗುವುದು ಎಂದು ಬಸವನಪುರ ವಾರ್ಡ್ ಪಾಲಿಕೆ ಸದಸ್ಯ ಜಯಪ್ರಕಾಶ್ ತಿಳಿಸಿದರು.

ಎಸ್.ಆರ್.ಎಫ್ ಫೌಂಡೇಶನ್ ವತಿಯಿಂದ 4 ಲಕ್ಷ ರೂ.ಗಳ ಸಿ.ಎಸ್.ಆರ್ ಅನುಧಾನದಲ್ಲಿ ನೀಡಿದ್ದ ಮಿನಿ ಸೈನ್ಸ್ ಸೆಂಟರ್‌ ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಬಸವನಪುರ ವಾರ್ಡ್ ನಲ್ಲಿ ಬರುವ ಎಲ್ಲಾ ಸರ್ಕಾರಿ ಶಾಲೆಗಳಿಗೂ ಪಾಲಿಕೆ ಅನುದಾನ ದಲ್ಲಿ ಸೌಲತ್ತು ಕಲ್ಪಿಸಿದ್ದು, ಚಿಕ್ಕ ದೇವಸಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 80 ಲಕ್ಷ ರೂ.ಗಳ ಪಾಲಿಕೆ ಅನುದಾನದಲ್ಲಿ ನೂತನ 6 ಕೊಠಡಿಗಳು ಕಟ್ಟಿಸಲಾಗಿದ್ದು, ಶಾಸಕ ಬಸವರಾಜ್ ಅವರಿಂದ ಉದ್ಘಾಟನೆ ಆಗಿರುತ್ತದೆ ಎಂದರು.

ನೂತನವಾಗಿ ನಿರ್ಮಿಸಿರುವ 6 ಕೊಠಡಿಗಳ ಪೈಕಿ ಒಂದು ಕೊಠಡಿಯನ್ನು ಮಿನಿ ಸೈನ್ಸ್ ಸೆಂಟರ್ ಗೆ ಬಳಸಿಕೊಳ್ಳಲಾಗಿದ್ದು, ಶಾಲಾ ಮಕ್ಕಳು ಉಪಯೋಗಿಸಲು ಮೂಕ್ತ ಗೊಳಿಸಲಾಯಿತು.

ಶಾಲಾ ಮಕ್ಕಳ ಸುರಕ್ಷಿತಗಾಗಿ ಒಂದು ಮತ್ತು ಎರಡನೇಯ ಮಾಡಿಗೆ ಗ್ರಿಲ್ ಹಾಗೂ ರಾಜಕಾಲುವೆ ಮೇಲೆ ಸ್ಲಾಬ್ ಅಳವಡಿಸಿ ಕೊಡುವಂತೆ ಮುಖ್ಯ ಉಪಾದ್ಯಾಯನಿ ಟಿ.ಸುನೀತಾ ಅವರು ಪಾಲಿಕೆ ಸದಸ್ಯರಲ್ಲಿ ಮನವಿ ಮಾಡಿದ್ದು ಶೀಘ್ರದಲ್ಲೇ ಅಳವಡಿಸಿ ಕೊಡುವುದಾಗಿ ಭರವಸೆಯನ್ನು ನೀಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos