ಋಣ ಮುಕ್ತ ಕಾಯ್ದೆ, ಸರ್ಕಾರಕ್ಕೆ ‘ಹೈ’ ನೋಟಿಸ್

ಋಣ ಮುಕ್ತ ಕಾಯ್ದೆ, ಸರ್ಕಾರಕ್ಕೆ ‘ಹೈ’ ನೋಟಿಸ್

ಬೆಂಗಳೂರು, ಆ. 12 : ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಜಾರಿಗೊಳಿಸಿದ್ದ,ಋಣ ಪರಿಹಾರ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಭಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ ಜಾರಿಗೊಳಿಸಿದೆ.
ಕರ್ನಾಟಕ ರಾಜ್ಯ ಜ್ಯುವೆಲರಿ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಮಾಚಾರಿ ಸಲ್ಲಿಸಿರುವ ಅರ್ಜಿ ಆಲಿಸಿದ ನ್ಯಾಯಮೂರ್ತಿ ಅಕೋಕ್ ಅರಾದೆ ಅವರ ಪೀಠ,ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಹಾಗೂ ಸಹಕಾರ ಇಲಾಖೆ ಕಾರ್ಯದರ್ಶಿ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟೀಸ್ ಜಾರಿಗೊಳಿಸಿ ಎರಡು ವಾರಗಳಲ್ಲಿ ಆಕ್ಷೇಪ ಸಲ್ಕಿಸುವಂತೆ ಸೂಚಿಸಿ ವುಚಾರಣೆಯನ್ನು ಆ,28 ಕ್ಕೆ ಮುಂದೂಡಿದೆ.
ಅರ್ಜಿದಾರರು ಗಿರವಿ ವ್ಯಾಪಾರಿಗಳಿಗೆ ಹಾಗೂ ಲೇವಾದೇವಿದಾರರಿಗೆ ಸರ್ಕಾರವೇ ಕಾನೂನು ಪ್ರಕಾರ ಪರವಾನಗಿ ನೀಡಿ,ತೆರಿಗೆಯನ್ನು ಸಂಗ್ರಹಿಸುತ್ತಿದೆ.ವಹಿವಾಟಯ ನಡೆಸಲು ಹಲವು ನಿಯಮಗಳನ್ನು ರೂಪಿಸಿರುವ ಸರ್ಕಾರ ಕನೂನು ಚೌಕಟ್ಟಿನಲ್ಲಿ ವ್ಯವಹಾರಿಸಲು ಅವಕಾಶ ಕಲ್ಪಿಸಿದೆ.ಆದರೆ ಋಣ ಪರಿಹಾರ ಕಾಯ್ದೆ ಜಾರಿಗೆ ತಂದು ಗಿರವಿ ವ್ಯಾಪಾರಿಗಳ ವಹಿವಾಟಿಗೆ ನಷ್ಟವುಂಟು ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದ್ದಾರೆ.
ರೈತರು ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಿದ್ದ ಸರ್ಕಾರ ಬ್ಯಾಂಕುಗಳಿಗೆ ಸರ್ಕಾರದ ಬೊಕ್ಕಸದಿಂದ ಹಣ ಮರುಪಾವತಿ ಮಾಡಿದೆ.
ಆದರೆ ಲೇವಾದೇವಿ ದಾರರಿಂದ ಪಡೆದ ಹಣ ಮನ್ನಾ ಮಾಡಿರುವ ಸರ್ಕಾರ ನಮಗೆ ಯಾವುದೇ ಹಣ ಪಾವತಿ ಅಥವಾ ಪರಿಹಾರ ನೀಡಿಲ್ಲ.
ಕನೂನು ಪ್ರಕಾರ ಪರವಾನಗಿ ಪಡೆದು ಗಿರವಿ ವ್ಯಾಪಾರದಲ್ಲಿ ತೊಡಗಿದ್ದ,ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ ಎಂದು ಅರ್ಜಿದಾರರು ಉಲ್ಲೇಖ ಮಾಡಿದ್ದು ಹದಿನಾಲ್ಕನೆ ವಿಧಿಯ ಸ್ಪಷ್ಟ ಉಲ್ಲಂಘನೆ ಆಗಿದೆ.ಆದ್ದರಿಂದ ಋಣ ಪರಿಹಾರ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಲು ಕೋರಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos