ಆರ್.ಎಸ್.ಎಸ್ ತಾಲೂಕಾ ಸಮಾವೇಶ

ಆರ್.ಎಸ್.ಎಸ್ ತಾಲೂಕಾ ಸಮಾವೇಶ

ಚಿಕ್ಕೋಡಿ, ಜ. 20:  ಭಾರತದಲ್ಲಿ ಯಾವದೇ ಗಲಭೆ, ಅಪಘಾತ, ಯುದ್ಧಗಳು ಸಂಭವಿಸಿದಾಗ ಮೊದಲು ಧಾವಿಸುವವನೇ ಸ್ವಯಂ ಸೇವಕ, ದೇಶಕ್ಕೆ ಪ್ರಾಣ ತ್ಯಾಗಕ್ಕು ಸಿದ್ಧ ರಾಷ್ಟ್ರೀಯ ಸ್ವಯಂ ಸೇವಕರು ಎಂದು  ಮದ್ಯ ಪ್ರದೇಶ ಗ್ವಾಲೀಯರನ ಅಖಿಲ ಭಾರತಿಯ ಸೇವಾ ಪ್ರಮುಖ ಪರಾಗಜೀ ಅಭ್ಯಂಕರ್ ಹೇಳಿದರು.

ಚಿಕ್ಕೋಡಿ ಪಟ್ಟಣದ ಆರ್.ಡಿ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕಾ ಸಮಾವೇಶ ಕಾರ್ಯಕ್ರಮಕ್ಕೆ ಬೌದಿಕ ವಕ್ತಾರರಾಗಿ ಆಗಮಿಸಿ ಮಾತನಾಡಿದ ಅವರು, ಹಲವು ದಶಕಗಳ ಹಿಂದೆ ಆರ್.ಎಸ್.ಎಸ್.ತಿರಸ್ಕಾರಕ್ಕೆ ಮುಂದಾದವರಿಗೆ ದೇಶದಲ್ಲಿ ಯುದ್ಧಗಳು ನಡೆದಾಗ ಮೇಲು ಕೀಳೆಂದು ಪ್ರಶ್ನಿಸದೆ ತಮ್ಮ ಜೀವದ ಹಂಗು ತೊರೆದು ಜನರ ಪ್ರಾನವನ್ನು ರಕ್ಷಿಸಿ ದಿಟ್ಟ ಉತ್ತರ ಸ್ವಯಂ ಸೇವಕರು ನೀಡಿದ್ದರು. ಸಣ್ಣ ಪುಟ್ಟ ಕಾರ್ಯಕ್ರಮದೊಂದಿಗೆ ದೇಶದಲ್ಲಿ ಈಗ ದೇಶದಲ್ಲಿ ಎಲ್ಲಾ ಜಾತಿಯವರನ್ನು ಒಳಗೊಂಡ ಸ್ವಯಂ ಸೇವಕರು ದೇಶವನ್ನು ಒಗ್ಗಟ್ಟಿನಿಂದ ಕಟ್ಟುತ್ತಿದ್ದರೆ. ದೇಶದಲ್ಲಿ ಅವಲಂಭಿತರಿಗೆ ಸ್ವಾವಲಂಬಿ ಜೀವನವನ್ನು ಕಲಿಸಿ ಕೊಡುತ್ತಿದ್ದು, ಅನ್ಯ ಧರ್ಮಿಯರನ್ನು ದೇಶದಲ್ಲಿ ಸಮಾನವಾಗಿ ಕಂಡು ಅವರನ್ನು ದೇಶದ ಎಳ್ಗೆಗೆ ಸಜ್ಜು ಮಾಡಿ, ಹಿಂದು ಸಂಸ್ಕೃತಿಯಂತೆ ಧರ್ಮವನ್ನು ಮುಂದಿಟ್ಟು ಮುನ್ನೆಡೆಯುತ್ತಿದೆ ಆರ್.ಎಸ್.ಎಸ್.

ಸಣ್ಣವರು ದೊಡ್ಡವರೆಂಬ ಭೇದತೊರೆದು ಒಂದೇ ಸಮಾನ ಹೆಜ್ಜೆಯೊಂದಿಗಿನ ನಡೆಯ ಉದ್ದೇಶವೆ ಪಥ ಸಂಚಲದ್ದಾಗಿದೆ. ದೇಶದಲ್ಲಿ ಸ್ವಯಂ ಸೇವಕರನ್ನು ತಯಾರಿ ಮಾಡಿ ಭಾರತವನ್ನು ಪರಮ ವೈಭವಕ್ಕೆ ಕರದುಕೊಂಡು ಹೊಗೋನ ಎಂದು ಭೊದಿಸಲಾಗುತ್ತದೆ. ರಾಷ್ಟ್ರ ನಿರ್ಮಾಣಕ್ಕೆ ಯೋಗದಾನ ಮಾಡುವ ಜನರನ್ನು ನಿರ್ಮಿಸುವದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉದ್ದೇಶ. ದೇಶದಲ್ಲಿ ಯಾವದೇ ವ್ಯಕ್ತಗೂ ಕಷ್ಟ ಬಂದರೆ ಅದನ್ನು ಸರಿಪಡಿಸುವ ಕೆಲಸ ಸ್ವಯಂ ಸೇವಕರು ಒಗ್ಗಟ್ಟಿನಿಂದ ಮಾಡೋಣ ಎಂದರು.

ರಾಣಿ ಚನ್ನಮ್ಮಾ  ವಿಶ್ವ ವಿದ್ಯಾನಿಲಯ ವಾಣಿಜ್ಯ ಪ್ರಾಧ್ಯಾಪಕರಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹರ್ಷಕುಮಾರ ಕಾಂಬಳೆ ಮಾತನಾಡಿ, ದೇಶದ ಪ್ರಧಾನಿಗಳು ಶಿಸ್ತನ ಸಿಪಾಯಿಗಳು ಆ ನಿಟ್ಟಿನಲ್ಲಿ ಸಿ.ಎ.ಎ ಕಾಯ್ದೆ ತಂದಿದ್ದಾರೆ. ದೇಶದ ಗೌರವಿಸುವದು ಹಾಗು ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ರಾಷ್ಟ್ರೀಯ ಸ್ವಯಂ ಸೇವಕರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದರು.

ವೇದಿಕೆ ಮೇಲೆ ಉತ್ತರ ಪಾಂತ್ಯ ಸಹ ಸಂಘ ಚಾಲಕರಾದ  ಅರವಿಂದ ದೇಶಪಾಂಡೆ,  ಜಿಲ್ಲಾ ಸಂಘ ಸಂಚಾಲಕ ಎಮ್. ವಾಯ್  ಹಾರೋಗೆರಿ ಇದ್ದರು. ರಾಜ್ಯ ಸಭಾ ಸಧಸ್ಯ ಪ್ರಭಾಕರ ಕೋರೆ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗೀಮಠ, ರಾಯಭಾಗ ಶಾಸಕ ದುರ್ಯೋಧನ ಐಹೊಳೆ, ರಾಚಪ್ಪಾ ಬಾಗಿ, ಸಂಜಯ ಅಡಕೆ, ಬಿ.ಜೆ.ಪಿ ಚಿಕ್ಕೊಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಾಜೇಶ ನೇರ್ಲಿ,  ಜಗದೀಶ ಕವಟಗೀಮಠ ಸೇರಿ ಗಣ್ಯರು, ಸಾವಿರಾರು ಸ್ವಯಂ ಸೇವಕರು ಹಾಗು ಮಹಿಳಾ ಸೇವಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos