34 ಲಕ್ಷ ರೈತರಿಗೆ ತಲಾ 2000 ಹಣ ಬಿಡುಗಡೆ: ಸಿಎಂ

34 ಲಕ್ಷ ರೈತರಿಗೆ ತಲಾ 2000 ಹಣ ಬಿಡುಗಡೆ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ ಹಿನ್ನೆಲೆ ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ಎಸ್​ಡಿಆರ್​ಎಫ್​ ಪರಿಹಾರ ನಿಧಿ ಅಡಿಯಲ್ಲಿ ಸರ್ಕಾರದಿಂದ 105 ಕೋಟಿ ರೂ. ಅನುದಾನ ನೀಡಲಾಗಿದ್ದು, ಪ್ರತಿ ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದ ಯಾವುದೇ ಪರಿಹಾರ ಬಾರದ ಹಿನ್ನೆಲೆ ರಾಜ್ಯ ಸರ್ಕಾರ ರೈತರಿಗೆ ಪ್ರಾಥಮಿಕ ಪರಿಹಾರ ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನವದೆಹಲಿಯಲ್ಲಿ ತೆರಿಗೆ ಹಂಚಿಕೆಯ ಬಗ್ಗೆ ರಾಜ್ಯದ ಪ್ರತಿಭಟನೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಟೀಕೆಸಿದ್ದಾರೆ ಹಾಗಾದರೆ ರಾಜ್ಯಕ್ಕೆ ಕೇಂದ್ರದಿಂದ ಆದ ಅನ್ಯಾಯ ವಿರೋಧಿಸುವುದು ತಪ್ಪೇ.

ಮುಖ್ಯಮಂತ್ರಿ ಆಗಿದ್ದಾಗ ಯಡಿಯೂರಪ್ಪ ಅವರು ಕೇಂದ್ರದ ವಿರುದ್ಧ ಧ್ವನಿ ಎತ್ತಲಿಲ್ಲ. ನಾವು 100 ಕಟ್ಟಿದ್ದರೆ ಕೇವಲ 13 ರಾಜ್ಯಕ್ಕೆ ವಾಪಸ್ಸು ಬರುತ್ತಿದೆ ರಾಜ್ಯದಿಂದ 430000 ಕೋಟಿ ತೆರಿಗೆ ಸಂಗ್ರಹವಾದರೆ ನಮಗೆ 50,257 ಕೋಟಿ ರೂ ಮಾತ್ರ ಮರಳಿ ಬರುತ್ತಿದೆ.

ಅವರ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ತಾತ್ಕಾಲಿಕ ಬರವಾಗಿ ಒಬ್ಬ ರೈತನಿಗೆ  ತಲಾ 2000 ಅಂತೆ ಸುಮಾರು 34 ಲಕ್ಷ ರೈತರಿಗೆ 650 ಕೋಟಿ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos