GT ವಿರುದ್ದ ಮೊದಲ ಸೋಲು ಕಂಡ RR

GT ವಿರುದ್ದ ಮೊದಲ ಸೋಲು ಕಂಡ RR

ಬೆಂಗಳೂರು: ನಿನ್ನೆ ನಡೆದ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 24ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗುಜರಾತ್ ಟೈಟನ್ಸ್ ತಂಡವು ಕೊನೆಯ ಎಸೆತದ ರೋಚಕ ಗೆಲುವು ಸಾಧಿಸಿತು.

ಈ ಮೂಲಕ ಐಪಿಎಲ್ 2024ರಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಸೋಲು ಅನುಭವಿಸಿತು. ಇನ್ನು ರಾಜಸ್ಥಾನ್ ಕೋಟೆ ಭೇದಿಸಿದ ಗುಜರಾತ್ ಟೈಟನ್ಸ್ ತಂಡ ಪಂದ್ಯಾವಳಿಯಲ್ಲಿ ಮೂರನೇ ಗೆಲುವು ಸಾಧಿಸಿತು.

ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 196 ರನ್‌ಗಳನ್ನು ಕಲೆಹಾಕಿತ್ತು.

197 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ನಾಯಕ ಶುಭ್ಮನ್ ಗಿಲ್ ಅವರ ಅಮೋಘ ಅರ್ಧಶತಕ ಮತ್ತು ರಶೀದ್ ಖಾನ್ ಅವರ ಪಂದ್ಯ-ವಿಜೇತ ಬೌಂಡರಿ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿ 3 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ನಾಟಕೀಯ ತಿರುವಿನಲ್ಲಿ ಕೊನೆಯ ಎಸೆತದವರೆಗೂ ತೆಗೆದುಕೊಂಡ ಹೋದ ಈ ಪಂದ್ಯವು ಕೊನೆಯ ಎಸೆತದಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ರಶೀದ್ ಖಾನ್ ಬೌಂಡರಿ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್‌ಗಳು ಬೇಕಾಗಿದ್ದಾಗ ರಾಹುಲ್ ತೆವಾಟಿಯಾ ಮೂರನೇ ರನ್ ಓಡುವಾಗ ರನೌಟ್ ಆದರು.

ಆಗ ಕೊನೆಯ ಎಸೆತದಲ್ಲಿ 2 ರನ್‌ಗಳು ಬೇಕಾಗಿದ್ದವು. ಅವೇಶ್ ಖಾನ್ ಅವರ ಕೊನೆಯ ಓವರ್‌ನ ಕೊನೆಯ ಎಸೆತವನ್ನು ರಶೀದ್ ಖಾನ್ ಬೌಂಡರಿ ಗಳಿಸಿ ಗೆಲುವು ಖಚಿತಪಡಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos