ಕುಖ್ಯಾತ ರೌಡಿನ ಸೆರೆ ಹಿಡಿದ 4 ಮಹಿಳಾ ಸಿಂಗಂ

ಕುಖ್ಯಾತ ರೌಡಿನ ಸೆರೆ ಹಿಡಿದ 4 ಮಹಿಳಾ ಸಿಂಗಂ

ಅಹಮ್ಮದಾಬಾದ್, ಮೇ. 6, ನ್ಯೂಸ್ ಎಕ್ಸ್ ಪ್ರೆಸ್: ಕಳೆದ 1 ವರ್ಷದಿಂದ ಕೊಲೆ, ಸುಲಿಗೆ ಸೇರಿದಂತೆ ನಟೋರಿಯಸ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್ ವೊಬ್ಬನನ್ನು ಗುಜರಾತ್ ನ ಭಯೋತ್ಪಾದನ ನಿಗ್ರಹ ದಳ ದಟ್ಟ ಅರಣ್ಯದೊಳಗೆ ಕಾರ್ಯಾಚರಣೆ ನಡೆಸುವ ಮೂಲಕ ಸೆರೆ ಹಿಡಿದಿದೆ. ಅದರಲ್ಲೂ ವಿಶೇಷವಾಗಿದ್ದೇನೆಂದರೆ ಹೀಗೆ ದಟ್ಟ ಕಾಡೊಳಗೆ ಕಾರ್ಯಾಚರಣೆ ನಡೆಸಿದ್ದು 4 ಜನ ದಿಟ್ಟ ಮಹಿಳಾ ಪೊಲೀಸರು

ಕುಖ್ಯಾತ ಡಾನ್ ಜುಸಬ್ ಅಲ್ಲಾರಖ್ ಸಾಂಡ್ (40ವರ್ಷ)ಎಂಬಾತನನ್ನು ಎಕೆ 47 ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸಿ ಎಟಿಎಸ್ ನ 4 ಜನ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜುನಾಗಢ್ ಮೂಲದ ಜುಸಬ್ ಮೇಲೆ ಕೊಲೆ, ಸುಲಿಗೆ, ಪೊಲೀಸರ ಮೇಲೆ ಗುಂಡಿನ ದಾಳಿ ಸೇರಿದಂತೆ 23 ಗಂಭೀರ ಪ್ರಕರಣಗಳು ದಾಖಲಾಗಿದ್ದವು.

ದೇವ್ ಧಾರಿ ಸಮೀಪದ ಬೋಟಾಡ್ ಅರಣ್ಯದೊಳಗೆ 4 ಮಹಿಳಾ ಸಿಂಗಂಗಳು ಕಾರ್ಯಾಚರಣೆ ನಡೆಸಿದ್ದರು. ಬಂಧಿತ ಕುಖ್ಯಾತ ಡಾನ್ ನನ್ನು ಸಿಐಡಿ ಕ್ರೈಂ ಬ್ರ್ಯಾಂಚ್ ಗೆ ಒಪ್ಪಿಸಿದ್ದು, ತನಿಖೆ ಮುಂದುವರಿದಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos