ರೌಡಿ ಶೀಟರ್ ಗಳಿಗೆ ಎಸ್ಪಿ ವಾರ್ನಿಂಗ್

ರೌಡಿ ಶೀಟರ್ ಗಳಿಗೆ ಎಸ್ಪಿ ವಾರ್ನಿಂಗ್

ಚಾಮರಾಜನಗರ, ಆ. 31 : ಗಣೇಶ ಚತುರ್ಥಿ,ಮೊಹರಂ ಹಬ್ಬಗಳ ಹಿನ್ನಲೆ ಚಾಮರಾಜನಗರದಲ್ಲಿ ರೌಡಿಶೀಟರ್ಗಳ ಪರೇಡ್ ನಡೆಸಲಾಯಿತ್ತು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ರೌಡಿ ಶೀಟರ್ ಗಳನ್ನು ಕರೆ ತರಲಾಯಿತು. ಪ್ರತಿಯೊಬ್ಬ ರೌಡಿ ಸೀಟರ್ ಬಗ್ಗೆ ಮಾಹಿತಿ ಪಡೆದುಕೊಂಡರು. ರೌಡಿಗಳಿಗೆ ವಾರ್ನಿಂಗ್ ಕೂಡ ಮಾಡಿದರು.  ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಕಾನೂನು ಕ್ರಮ ಜರುಗಿದಲಾಗುವುದು ಎಂದು ಎಸ್ಪಿ ಎಚ್.ಡಿ.ಆನಂದಕುಮಾರ್ ಎಚ್ಚರಿಕೆ ನೀಡಿದರು. ಎಎಸ್ಪಿ ಅನಿತಾ ಬಿ. ಹದ್ದಣ್ಣವರ್, ಡಿವೈಎಸ್ಪಿ ಮೋಹನ್ ಇತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos