ರೋಸ್ ವಾಟರ್ ಚರ್ಮದ ಸೌಂದರ್ಯ ಹೆಚ್ಚಿಸಲು ಸಹಕಾರಿ

ರೋಸ್ ವಾಟರ್ ಚರ್ಮದ ಸೌಂದರ್ಯ ಹೆಚ್ಚಿಸಲು ಸಹಕಾರಿ

ಸೌಂದರ್ಯವರ್ಧಕಗಳನ್ನು ಬಳಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸಕೊಳ್ಳಬಹುದು, ಅದರೆ ಈ ಸೌಂದರ್ಯವರ್ಧಕಗಳಲ್ಲಿ ಕೆಲವೊಂದು ನೈಸರ್ಗಿಕವಾಗಿದ್ದರೆ ಇನ್ನು ಕೆಲವು ರಾಸಾಯನಿಕವಾಗಿರುತ್ತವೆ.

ಮುಖದ ವರ್ಧಿಸಲು ಹಾಗೂ ತ್ವಚೆಯ ಆರೈಕೆಯ ಹಲವಾರು ಬಗೆಯ ಸೌಂದರ್ಯ ವರ್ಧಕಗಳಲ್ಲಿ ರೋಸ್ ವಾಟರ್ ಬಳಸುತ್ತಾರೆ. ಇದು ತುಂಬಾ ಅಗ್ಗದ ದರ ಹಾಗೂ ಸುಲಭವಾಗಿ ಸಿಗುತ್ತದೆ.

ಚರ್ಮದ ಆರೋಗ್ಯಕ್ಕೆ ಬಹಳ ಸಹಕಾರಿಯಾದಂತಹ ಪದಾರ್ಥ ರೋಸ್ ವಾಟರ್. ಚರ್ಮವು ಕೆಂಪಾಗುವುದನ್ನು, ಬಿರಿಯುವುದನ್ನು ತಡೆಯಲು, ಕಡಿಮೆ ಮಾಡಲು ಇದರ ಆಂಟಿ ಇನ್ಫ್ಲಮೇಟರಿ ಗುಣವು ಸಹಾಯ ಮಾಡುತ್ತದೆ. ಒಂದು ರೀತಿಯ ಉರಿಯಾದ ಚಳಿಯಿಂದ ನಮ್ಮ ಚರ್ಮವನ್ನು ರಕ್ಷಿಸಲು ಸಹಕಾರಿ.

ಅನೇಕ ಮಹಿಳೆಯರಿಗೆ ಚಳಿಗಾಲದಲ್ಲಿ ಮೊಡವೆಯ ಸಮಸ್ಯೆ ಹೆಚ್ಚಾಗುತ್ತದೆ. ಚರ್ಮದ ರಂಧ್ರಗಳು ಶುಷ್ಕವಾಗುವುದರಿಂದ ಸಮಸ್ಯೆ ಅಧಿಕ. ರಂಧ್ರಗಳು ತೆರೆದುಕೊಂಡು ಸಹ ತೊಂದರೆಯಾಗಬಹುದು. ಈ ಎರಡೂ ಸಮಸ್ಯೆಯನ್ನು ಹತೋಟಿ ಮಾಡುವಂತಹ ಗುಣವನ್ನು ರೋಸ್ ವಾಟರ್ ಹೊಂದಿದೆ. ಹತ್ತಿ ಬಟ್ಟೆಯನ್ನು ರೋಸ್ ವಾಟರ್ನಲ್ಲಿ ಅದ್ದಿ ಅದರಿಂದ ಇಡೀ ಮುಖಕ್ಕೆ ಹಚ್ಚಿಕೊಳ್ಳಬೇಕು. ದಿನಕ್ಕೆ ಎರಡು ಬಾರಿಯಂತೆ ಮಾಡುವುದು ಉತ್ತಮ. ವಿಟಮಿನ್ ಸಿ ಹೆಚ್ಚಿರುವ ಆಂಟಿ ಆಕ್ಸಿಡೆಂಟ್ಗಳಿಂದ ಕೂಡಿರುವಂತಹ ಆಹಾರವನ್ನು ಹೆಚ್ಚು ಸೇವಿಸೋಣ. ಇದು ಆರೋಗ್ಯ ನಿರ್ವಹಣೆಗೆ ಉಪಯುಕ್ತ. ಚಳಿಗಾಲದಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಸಹ ದುರ್ಬಲವಾಗುವುದರಿಂದ ಅಚ್ಚುಕಟ್ಟಾದ ಆಹಾರ ವ್ಯವಸ್ಥೆಯನ್ನು ರೂಢಿಸಿಕೊಳ್ಳೋಣ.

ಫ್ರೆಶ್ ನ್ಯೂಸ್

Latest Posts

Featured Videos