ರೋಹಿತ ದಾಖಲೆ ಮುರಿದ ಕೊಹ್ಲಿ

ರೋಹಿತ ದಾಖಲೆ ಮುರಿದ ಕೊಹ್ಲಿ

ಮೊಹಾಲಿ, ಸೆ.18 : ರೋಹಿತ್ ಶರ್ಮಾ ದಾಖಲೆಯನ್ನು ಮುರಿದಿರುವ ಟೀಮ್ ಇಂಡಿಯಾ ನಾಯಕ ಕೊಹ್ಲಿ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ದಾಖಲೆ ವಿರಾಟ್ ಹೆಸರಲ್ಲೇ ಇದ್ದರೂ ರೋಹಿತ್ ಶರ್ಮಾ ಮುರಿದಿದ್ದರು. ಇದೀಗ ಮತ್ತೆ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಟ್ವೆಂಟಿ-20 ಕ್ರಿಕೆಟ್ಗೂ ತಾವೇ ಸಾಮ್ರಾಟ್ ಎಂಬುದನ್ನು ಸಾಬೀತು ಮಾಡಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳು:
1. ವಿರಾಟ್ ಕೊಹ್ಲಿ: 2441 (71 ಪಂದ್ಯ, 66 ಇನ್ನಿಂಗ್ಸ್)
2. ರೋಹಿತ್ ಶರ್ಮಾ: 2434 (97 ಪಂದ್ಯ, 89 ಇನ್ನಿಂಗ್ಸ್)
3. ಮಾರ್ಟಿನ್ ಗಪ್ಟಿಲ್: 2283 (78 ಪಂದ್ಯ, 75 ಇನ್ನಿಂಗ್ಸ್)
4. ಶೋಯಿಬ್ ಮಲಿಕ್: 2263 (111 ಪಂದ್ಯ, 104 ಇನ್ನಿಂಗ್ಸ್)
5. ಬ್ರೆಂಡನ್ ಮೆಕಲಮ್: 2140 (71 ಪಂದ್ಯ, 70 ಇನ್ನಿಂಗ್ಸ್)

ಫ್ರೆಶ್ ನ್ಯೂಸ್

Latest Posts

Featured Videos