ರಾಕಿಂಗ್ ಜೋಡಿಗೆ ಗಂಡು ಮಗು

ರಾಕಿಂಗ್ ಜೋಡಿಗೆ ಗಂಡು ಮಗು

ಬೆಂಗಳೂರು, ಅ. 30 : ದೀಪಾವಳಿ ಹಬ್ಬದ ಸಂಭ್ರಮ-ಸಡಗರದ ಮಧ್ಯೆ ಯಶ್ ಮತ್ತು ರಾಧಿಕಾ ಪಂಡಿತ್ ಬಾಳಲ್ಲಿ ಮತ್ತೊಂದು ಖುಷಿ. ದಂಪತಿಗೆ ಆಯ್ರಾ ಎಂಬ 10 ತಿಂಗಳ ಹೆಣ್ಣು ಮಗುವಿದೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ರಾಕಿಂಗ್ ಜೋಡಿಗೆ ಗಂಡು ಮಗುವಾಗಿದೆ. ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾರ ಅಭಿಮಾನಿಗಳಿಗೆ ಸಿಹಿ ಸುದ್ದಿ. ರಾಧಿಕಾ ಪಂಡಿತ್ ಇಂದು ಮುಂಜಾನೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಕುಟುಂಬದ ಮೂಲಗಳು ತಿಳಿಸಿವೆ.

ಜೂನಿಯರ್ ಯಶ್ ಎಂಟ್ರಿ : ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಬಾಳಲ್ಲಿ ಮತ್ತೊಂದು ಖುಷಿ. ದಂಪತಿಗೆ ಆಯ್ರಾ ಎಂಬ 10 ತಿಂಗಳ ಹೆಣ್ಣು ಮಗುವಿದೆ. ಈಗ ಇನ್ನೊಬ್ಬ ಜೂನಿಯರ್ ಯಶ್ ಎಂಟ್ರಿ ಕೊಟ್ಟಿದ್ದಾನೆ. ಸದ್ಯ ಮನೆಯಲ್ಲಿ ಜೂನಿಯರ್ ಯಶ್ ಆಗಮನದಿಂದ ಯಶ್ ಅಭಿಮಾನಿಗಳು ಖುಷಿ. ಇತ್ತೀಚೆಗೆ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದರು. ರಾಧಿಕಾ ಸ್ನೇಹಿತರು ಆಯೋಜಿಸಿ ಅವರಿಗೆ ಸರ್ಪ್ರೈಸ್ ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos