ರೋಬೋಟಿಕ್ ಪಿತ್ತಜನಕಾಂಗ ಕಸಿ ಯಶಸ್ವಿ

ರೋಬೋಟಿಕ್ ಪಿತ್ತಜನಕಾಂಗ ಕಸಿ ಯಶಸ್ವಿ

ಬೆಂಗಳೂರು, ಡಿ. 17: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯು 4೦ ವರ್ಷ ವಯಸ್ಸಿನ ವ್ಯಕ್ತಿಗೆ ಅನನ್ಯವಾದ ರೋಬೋಟಿಕ್ ಪಿತ್ತ ಜನಕಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ರಾಜ್ಯದಲ್ಲಿಯೇ ತನ್ನ ರೀತಿಯ ಪ್ರಥಮ ಹಿಂದೆAದೂ ಇಲ್ಲದಂತಹ ಕ್ರಮವಾಗಿದ್ದು, ದಾನಿಯ ಹೊಟ್ಟೆಯ ಭಾಗದಲ್ಲಿ  ಯಾವುದೇ  ಗಾಯದ ಗುರುತಿಲ್ಲದೆ, ಹೊಟ್ಟೆಯ ತಳಭಾಗದಲ್ಲಿ ಅತ್ಯಂತ ಸಣ್ಣ ಗುರುತು ಉಳಿಯುವಂತೆ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಎಚ್ಪಿಬಿ ಮತ್ತು ಪಿತ್ತ ಜನಕಾಂಗ ಶಸ್ತ್ರಚಿಕಿತ್ಸೆ ಸಲಹಾತಜ್ಞರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ರವಿಚಂದ್ ಸಿದ್ದಾಚಾರಿ ಅವರು ಈ ಮೈಲುಗಲ್ಲಿನಂತಹ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.

32 ವರ್ಷ ವಯಸ್ಸಿನ ಹತ್ತಿರದ ಸಂಬಂಧಿಯೊಬ್ಬರಿಂದ ಪಿತ್ತಜನಕಾಂಗದ ಭಾಗವನ್ನು ಫಲಾನುಭವಿ ಸ್ವೀಕರಿಸಿರುತ್ತಾರೆ. ದಾನಿನ ಪಿತ್ತಜನಕಾಂಗದ ಭಾಗವನ್ನು ರೋಬೋಟಿಕ್ ಆರ್ಮ್ ಮೂಲಕ ಹೊರ ತೆಗೆಯಲಾಯಿತು. ದಾನಿಯ ಪಿತ್ತಜನಕಾಂಗವನ್ನು ಹೊರತೆಗೆಯುವ ಈ ಪ್ರಕ್ರಿಯೆಗೆ ಲಿವರ್ ಹೆಪಾಟೆಕ್ಟೊಮಿ ಎನ್ನಲಾಗುತ್ತದೆ.

ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ಕುರಿತು  ತಮ್ಮ ಚಿಂತನೆಗಳನ್ನು ಹಂಚಿಕೊಂಡ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಎಚ್ಪಿಬಿ ಮತ್ತು ಪಿತ್ತ ಜನಕಾಂಗ ಶಸ್ತ್ರಚಿಕಿತ್ಸೆ ಸಲಹಾತಜ್ಞರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ರವಿಚಂದ್ ಸಿದ್ದಾಚಾರಿ ಅವರು ಮಾತನಾಡಿ, “ರೋಗಿಯು ದೀರ್ಘಕಾಳದ ಪಿತ್ತಜನಕಾಂಗ ವೈಫಲ್ಯದಿಂದ ಬಳಲುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿತ್ತು. ವಾಸ್ತವವಾಗಿ ಪಿತ್ತಜನಕಾಂಗ ಕಸಿ ಮಾತ್ರ ಅವರಿಗೆ ಏಕೈಕ ಭರವಸೆಯಾಗಿತ್ತು. ಆದರೆ ಆದರೆ ಯುವ ವ್ಯಕ್ತಿಯಾಗಿದ್ದ ದಾನಿ ತಮ್ಮ ದೇಹದ ಮೇಲಿನ ಗಾಯದ ಬಗ್ಗೆ ಭಯ ಹೊಂದಿದ್ದರಲ್ಲದೇ ಈ ಕುರಿತು ನಾವು ಎಚ್ಚರಿಕೆ ವಹಿಸಬೇಕಿತ್ತು. ರೋಬೋಟಿಕ್ ಆರ್ಮ್ಗಳು ಮತ್ತು ಕ್ಯಾಮೆರಾವನ್ನು ದಾನಿಯ ಹೊಟ್ಟೆಯೊಳಗೆ ಇರಿಸಲಾಗಿತ್ತು.

ಕ್ಯಾಮೆರಾ 360 ಡಿಗ್ರಿ ದೃಶ್ಯ ಸಾಧ್ಯತೆಯನ್ನು ನೀಡುವುದಲ್ಲದೇ, ಇದರಿಂದ ಅತ್ಯಂತ ನಿಖರತೆಯೊಂದಿಗೆ ರೋಬೋಟಿಕ್ ಕೈಗಳು ದಾನಿಯ ಪಿತ್ತಜನಕಾಂಗದ ಭಾಗವನ್ನು ಹೊರತೆಗೆಯಲು ಅವಕಾಶ ಲಭಿಸಿತ್ತು. ಕೀಹೋಲ್ ಕ್ಯಾಮೆರಾದಿಂದ ಉಂಟಾದ ಗಾಯ ಕೇವಲ 10 ಸೆಂಟಿ ಮೀಟರ್ಗಳಷ್ಟಿತ್ತು. ಸಾಮಾನ್ಯ ತೆರೆದ ಶಸ್ತ್ರಚಿಕಿತ್ಸೆಯಲ್ಲಿ ಈ ಗಾಯ 35 ಸೆಂಟಿ ಮೀಟರ್ಗಳವರೆಗೂ ಇರುತ್ತದೆ. ರೋಬೋಟಿಕ್ ಕೈಗಳ ಬಳಕೆ ಅನೇಕ ಲಾಭಗಳನ್ನು ಹೊಂದಿದೆ. ಕ್ಷಿಪ್ರ ಚೇತರಿಕೆ, ನಿಖರತೆ, ಕನಿಷ್ಠ ರಕ್ತ,  ಕನಿಷ್ಠ ಅವಧಿಯ ಆಸ್ಪತ್ರೆವಾಸ ಮುಂತಾದವು ಇವುಗಳಲ್ಲಿ ಸೇರಿವೆ. ಈ ರೋಬೋಟಿಕ್ ಕೈಗಳು ಅತ್ಯಂತ ಚಿಕ್ಕ ಮೂಲೆಗಳಿಗೂ ತಲುಪಬಹುದಾಗಿದ್ದು, ಮಾನವ ಕೈಗಳಿಂದಲೂ ಕೂಡ ಇದನ್ನು ಸಾಧಿಸಲಾಗದು. ಜೊತೆಗೆ ಇವುಗಳಿಂದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಸುಸ್ತು ಕೂಡ ಬಾಧಿಸುವುದಿಲ್ಲ. ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಸಾಮಾನ್ಯವಾಗಿ ಮೂತ್ರಪಿಂಡ, ಹೃದಯ ಮತ್ತು ಮಹಿಳೆಯರ ರೋಗ ಸಂಬಂಧಿತ ವೈದ್ಯಕೀಯ ಸಮಸ್ಯೆಗಳಲ್ಲಿ ನಡೆಸಲಾಗುತ್ತದೆ” ಎಂದರು.

 

 

ಫ್ರೆಶ್ ನ್ಯೂಸ್

Latest Posts

Featured Videos