ರಸ್ತೆ ಅಗಲೀಕರಣದ ಕಾಮಗಾರಿ ಅವೈಜ್ಞಾನಿಕ

ರಸ್ತೆ ಅಗಲೀಕರಣದ ಕಾಮಗಾರಿ ಅವೈಜ್ಞಾನಿಕ

ಕೋಲಾರ: ನಗರದ ಎಪಿಎಂಸಿ ಮಾರ್ಕೆಟ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಕೋಟ್ಯಾಂತರ ರೂಪಾಯಿ ಹಣ ನೀಡಿದ್ದು ರಸ್ತೆ, ಚರಂಡಿ ಕಾಮಗಾರಿಗಳು ಅವೈಜ್ಞಾನಿಕವಾಗಿ ಕೂಡಿದೆ ಎಂದು ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಕುರುಬರಪೇಟೆ ವೆಂಕಟೇಶ್ ಆರೋಪಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಚರಂಡಿ ಕಾಮಗಾರಿಯು ಇಲಾಖೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷö್ಯದಿಂದ Z್ಪರಂಡಿಯ ಮದ್ಯದಲ್ಲೆ ವಿದ್ಯುತ್ ಕಂಬಗಳನ್ನು ಬಿಟ್ಟು ಚರಂಡಿ ನಿರ್ಮಾಣ ಮಾಡಲಾಗಿದೆ. ಹಾಲಿ ಇರುವ ರಸ್ತೆ ಮದ್ಯಭಾಗದಿಂದ ಎರಡು ಬದಿಯಲ್ಲಿ 40 ಅಡಿಗಳ ರಸ್ತೆ ವಿಸ್ತರಿಸಬೇಕಾಗಿದ್ದು ಕೆಲವು ಕಡೆ ಕಡಿಮೆ ವಿಸ್ತರಣೆ ಮಾಡಲಾಗಿದೆ.

ಕಳೆದ ಒಂದು ವರ್ಷದಿಂದ ನಗರದಲ್ಲಿ ಯುಜಿಡಿ ನೆಪದಲ್ಲಿ ರಸ್ತೆಗಳನ್ನು ಅಗೆದು ಪ್ಯಾಚ್ ಹಾಕದೆ ನಗರ ನೀರು ಸರಬರಾಜು ಇಲಾಖೆ ಕಾಲಕಳೆಯುತ್ತಿದೆ ಮತ್ತು ಕೆಲವು ರಸ್ತೆಗಳು ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಕೆಲವು ಲೋಕಪಯೋಯೋಗಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದವು ಎಂದು ಹೇಳಿಕೊಂಡು ಅಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ.

ಮುಖ್ಯ ರಸ್ತೆಯಲ್ಲಿ. ನಡೆಯುತ್ತಿರುವ ಕಾಮಗಾರಿ ಎಲೆಕ್ಟಿçಕ್ ವೈರ್ ನೀರಿನ ಪೈಪ್, ನೆಟ್ವರ್ಕ್ ವೈರ್ ಹಾದು ಹೋಗಲು ಎಲ್ಲಿಯೂ ಸಹ ಅವಕಾಶ ಮಾಡಿಕೊಟ್ಟಿಲ್ಲ ಪ್ರಸ್ತುತ ಮುಖ್ಯ ರೆಸ್ತೆಯಲ್ಲಿ ನಡೆಯುತ್ತಿರುವ ಮೋರಿ ಕಾಮಗಾರಿ ಪಕ್ಕದಲ್ಲಿ ಇವುಗಳೆಲ್ಲ ಹಾದುಹೋಗಲು ವ್ಯವಸ್ಥೆ ಮಾಡಬಾಕಾಗಿದೆ ಹಾಗೂ ನಗರದ ಒಳಗಡೆ ದೊಡ್ಡಪೇಟೆ ರಸ್ತೆ, ಎಂ.ಜಿ ರಸ್ತೆಗಳು ಬಹಳ ಕಿರಿದಾಗಿದ್ದು ಈ ರಸ್ತೆಗಳಲ್ಲಿ ನಡೆದಾಡಲು ಸಹ ಕಷ್ಟವಾಗಿದೆ ಆದಷ್ಟು ಬೇಗ ಈ ರಸ್ತೆಗಳನ್ನು ಅಗಲೀಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಗರದ ಅಭಿವೃದ್ದಿಗೆ ಒತ್ತು ನೀಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos