ಒಂದೂವರೆ ವರ್ಷದ ಬಳಿಕ ಕ್ರಿಕೆಟ್ ಆಡಲಿರುವ ರಿಷಭ್ ಪಂತ್!

ಒಂದೂವರೆ ವರ್ಷದ ಬಳಿಕ ಕ್ರಿಕೆಟ್ ಆಡಲಿರುವ ರಿಷಭ್ ಪಂತ್!

ಬೆಂಗಳೂರು: 2022ರ ಡಿಸೆಂಬರ್ 30ರಂದು ಭೀಕರ ಕಾರು ಅಪಘಾತದಿಂದ ಚೇತರಿಸಿಕೊಂಡ ನಂತರ ರಿಷಭ್ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ್ದಾರೆ. ಐಪಿಎಲ್​ಗೆ ಕಂಬ್ಯಾಕ್ ಮಾಡಿರುವ ಪಂತ್, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇದು ಈ ಐಪಿಎಲ್​ನ ದೊಡ್ಡ ಚರ್ಚೆಯ ವಿಷಯವಾಗಿದೆ. 2020ರಲ್ಲಿ ರನ್ನರ್ಸ್​ಅಪ್ ಆಗಿದ್ದ ಡೆಲ್ಲಿ, 2021ರಲ್ಲಿ ಮೊದಲ ತಂಡವಾಗಿ ಪ್ಲೇಆಫ್​ಗೆ ಪ್ರವೇಶಿಸಿತು ಆದರೆ ಫೈನಲ್ ಪ್ರವೇಶಿಸಲು ವಿಫಲವಾಯಿತು. ಕಳೆದ ಎರಡು ಅಭಿಯಾನಗಳಲ್ಲಿ ಡೆಲ್ಲಿ ಪ್ಲೇಆಫ್​​ಗೆ ಅರ್ಹತೆ ಪಡೆಯಲು ವಿಫಲರಾಗಿದೆ.

ವೈಯಕ್ತಿಕ ಕಾರಣಗಳಿಂದಾಗಿ ಹ್ಯಾರಿ ಬ್ರೂಕ್ ಪಂದ್ಯಾವಳಿಯಿಂದ ಹಿಂದೆ ಸರಿದರೂ ಡೆಲ್ಲಿ ಕ್ಯಾಪಿಟಲ್ಸ್ ಬಲವಾದ ಬ್ಯಾಟಿಂಗ್ ಲೈನ್ಅಪ್ ಹೊಂದಿದೆ. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ವಿದೇಶಿ ಆಟಗಾರರ ಜೊತೆಗೆ ರಿಷಭ್ ಪಂತ್, ಪೃಥ್ವಿ ಶಾ ಮತ್ತು ಅಕ್ಷರ್ ಪಟೇಲ್ ಅವರಂತಹ ಭಾರತೀಯ ತಾರೆಗಳು ತಂಡದ ಬಲ ಹೆಚ್ಚಿಸಿದ್ದಾರೆ.

ಆದರೆ ಪಂತ್ ಅವರ ಫಾರ್ಮ್​ ಟೀಮ್ ಮ್ಯಾನೇಜ್​ಮೆಂಟ್ ಚಿಂತೆ ಹೆಚ್ಚಿಸಿದೆ. ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ ಪಂತ್​ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಗಾಯದಿಂದ ಚೇತರಿಸಿಕೊಂಡ ನಂತರ ಸ್ಪರ್ಧಾತ್ಮಕ ಕ್ರಿಕೆಟ್​​​ ಆಡದ ವಿಕೆಟ್ ಕೀಪರ್ ಬ್ಯಾಟರ್​, ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ನಾಯಕನಾಗಿ ಅವರ ಪಾತ್ರ ಹೇಗಿರಲಿದೆ? ಎದುರಾಳಿಯನ್ನು ಕಟ್ಟಿಹಾಕುವ ಸಾಮರ್ಥ್ಯ, ಆಲೋಚನೆಗಳು, ತಂತ್ರಗಳು, ಗೇಮ್​ ಪ್ಲಾನ್ಸ್ ಹೇಗೆ ಇರಲಿವೆ ಎಂಬುದು ಕುತೂಹಲ ಮೂಡಿಸಿದೆ. ಬ್ಯಾಟಿಂಗ್​ ವಿಭಾಗ ಬಲಿಷ್ಠವಾಗಿದ್ದರೂ ವೇಗದ ಬೌಲಿಂಗ್ ವಿಭಾಗದಲ್ಲಿ ತಂಡವು ದುರ್ಬಲವಾಗಿದೆ. ಅನ್ರಿಚ್ ನೋಕಿಯಾ ಲಭ್ಯತೆ ಮತ್ತು ಫಿಟ್ನೆಸ್ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಇದು ಇಬ್ಬರು ವೇಗಿಗಳಾದ ಮುಕೇಶ್ ಕುಮಾರ್ ಮತ್ತು ಖಲೀಲ್ ಅಹ್ಮದ್ ಅವರ ಮೇಲೆ ಒತ್ತಡ ಹೆಚ್ಚಿಸಿದರೂ ಅಚ್ಚರಿ ಇಲ್ಲ. ಆದರೆ ಬೌಲಿಂಗ್​ ವಿಭಾಗವನ್ನು ಹೇಗೆ ಬಲಿಷ್ಠಗೊಳಿಸಲಿದ್ದಾರೆ ಎಂಬುದು ಸಹ ಕುತೂಹಲ ಮೂಡಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos