ರಾಮ್ ರಾಜ್ ಬ್ರ್ಯಾಂಡ್ಗೆ ರಿಷಬ್‌ ಶೆಟ್ಟಿ ಎಂಟ್ರಿ

ರಾಮ್ ರಾಜ್ ಬ್ರ್ಯಾಂಡ್ಗೆ ರಿಷಬ್‌ ಶೆಟ್ಟಿ ಎಂಟ್ರಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಟ ನಟಿಯರು ಒಂದು ಸಿನಿಮಾ ಅಥವಾ ಎರಡು ಸಿನಿಮಾ ಭರ್ಜರಿ ಯಶಸು ಕಂಡಾಗ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದೇ ತರ ಕೆಜಿಎಫ್ ಸಿನಿಮಾ ಬಹುದೊಡ್ಡ ಮಟ್ಟದ ಯಶಸ್ಸು ಕಂಡ ಮೇಲೆ ನಟ ಯಶ್ ರವರಿಗೆ ಅನೇಕ ಜಾಹೀರಾತುಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಲು ಹೆಚ್ಚಾಗಿ ಕರೆ ಬಂದಿತ್ತು. ದೊಡ್ಡ ದೊಡ್ಡ ಬ್ರ್ಯಾಂಡ್ ಕಂಪೆನಿಗಳು ಯಶ್ ಬೆನ್ನ ಹಿಂದೆ ಬಿದ್ದಿವೆ. ಆದ್ರೆ ರಾಕಿ ಮಾತ್ರ ಅಳೆದು ತೂಗಿ ತನಗಿಷ್ಟವಾದ ಜಾಹೀರಾತನ್ನ ಆಯ್ಕೆ ಮಾಡಿಕೊಂಡಿದ್ರು ಅದರಲ್ಲೊಂದು ರಾಮ್ ರಾಜ್ ಬಟ್ಟೆ ಬ್ರ್ಯಾಂಡ್.

ರಾಮ್ ರಾಜ್ ಪಂಚೆಗಳು ಮತ್ತು ಶರ್ಟ್‌ಗಳು ಅಂತ ಯಶ್ ಜಾಹೀರಾತು ನೀಡುತ್ತಿದ್ದಂತೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಅಷ್ಟೆ ಅಲ್ಲ ಮಾರ್ಕೇಟ್ನಲ್ಲಿ ರಾಮ್ ರಾಜ್ ಪ್ರಾಡೆಕ್ಟ್ಗೆ ಭಾರಿ ಬೇಡಿಕೆ ಬಂದಿತ್ತು. ಇದೀಗ ಕೆಜಿಎಫ್ ಕಿಂಗ್ ಇದ್ದ ರಾಮರಾಜ್ ಜಾಗಕ್ಕೆ ಡಿವೈನ್ ಸ್ಟಾರ್ ರಿಷಬ್ಎಂಟ್ರಿ ಆಗಿದ್ದಾರೆ. ರಾಕಿ ಭಾಯ್ ಅಚ್ಚು ಮೆಚ್ಚಿನ ರಾಮ್ ರಾಜ್ ಜಾಹೀರಾತನ್ನ ನಟ ರಿಷಬ್ ಶೆಟ್ಟಿ ಕಿತ್ತುಕೊಂಡಿದ್ದಾರೆ. ರಾಮ್ ರಾಜ್ ಬ್ರ್ಯಾಂಡ್ ರಿಷಬ್ ಶೆಟ್ಟಿ ಪಾಲಾಗಿದೆ. ಶೆಟ್ರು  ಈಗ ಪಂಚೆ ಸ್ಟಾರ್ ಆಗಿದ್ದು. ಕಾಂತಾರ ಸಿನಿಮಾದಲ್ಲಿ ಕಾಡು ಬೆಟ್ಟದ ಶಿವನಾಗಿದ್ದ ರಿಷಬ್ ಇಡೀ ಸಿನಿಮಾ ಪಂಚೆಯಲ್ಲಿದ್ರು.

ಈ ಸಿನಿಮಾ ವರ್ಕ್ ಶುರುವಾದ್ಮೇಲೆ ಎಲ್ಲಾ ಕಡೆ ಪಂಚೆಯಲ್ಲೇ ಓಡಾಡುತ್ತಿದ್ರು. ಇಡೀ ದೇಶ ವಿದೇಶವನ್ನ ಪಂಚೆ ತೊಟ್ಟೇ ಓಡಾಡಿದ್ರು. ಹೀಗಾಗಿ ರಿಷಬ್ಗೆ ರಾಮ್ ರಾಜ್ ಬಟ್ಟಿಗಳಿಗೆ ಬ್ರ್ಯಾಂಡ್ ಅಂಬಾಸೀಡರ್ ಆಗೋ ಅವಕಾಶ ಬಂದಿದೆ. ಈ ರಾಮ್ ರಾಜ್ ಬ್ರ್ಯಾಂಡ್ಗೆ ರಿಷಬ್ ಒಂದುವರೆ ಕೋಟಿ ಸಂಭಾವನೆ ಪಡೆದಿದ್ದಾರೆ ಅಂತ ಹೇಳಲಾಗ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos