ಆ ಘಳಿಗೆಯನ್ನು ನೆನಪಿಸಿಕೊಂಡ ರಿಂಕು ಸಿಂಗ್!

ಆ ಘಳಿಗೆಯನ್ನು ನೆನಪಿಸಿಕೊಂಡ ರಿಂಕು ಸಿಂಗ್!

ಭಾರತ ಕ್ರಿಕೆಟ್ ತಂಡದಲ್ಲಿ ಆಡುವ ಆಸೆ ಎಲ್ಲರಿಗೂ ಸಹ ಇರುತ್ತದೆ. ಆದರೆ ಆಡುವ ಆಸೆ ಎಲ್ಲರಿಗೂ ನನಸಾಗುವುದಿಲ್ಲ. ಏಕೆಂದರೆ ಅವರು ಆಡುವ ಆಟದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಫಿಟ್ ಆಗಿ ಇರಬೇಕು, ನೀಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿರುವ ಗೇಮ್ ಫಿನಿಶರ್ ಖ್ಯಾತಿಯ ರಿಂಕು ಸಿಂಗ್. ವಾಸ್ತವವಾಗಿ ಐರ್ಲೆಂಡ್ ವಿರುದ್ಧ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದ ರಿಂಕುಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡ ರಿಂಕು 38 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿ, ಬ್ಯಾಟ್ ಬೀಸಿದ ಮೊದಲ ಪಂದ್ಯದಲ್ಲಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.
ಇನ್ನು ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ರಿಂಕು ಬ್ಯಾಟಿಂಗ್ಗೆ ಇಳಿದಾಗ ಇಡೀ ಮೈದಾನ ರಿಂಕು ರಿಂಕು ಎಂಬ ಘೋಷಣೆಯಿಂದ ತುಂಬಿ ಹೋಗಿತ್ತು. ಪಂದ್ಯದ ನಂತರ, ತಮ್ಮ ಸಹ ಆಟಗಾರ ರವಿ ಬಿಷ್ಣೋಯ್ ಅವರೊಂದಿಗೆ ಮಾತನಾಡಿರುವ ರಿಂಕು ಆ ಐದು ಸಿಕ್ಸರ್‌ಗಳು ತಮ್ಮ ಜೀವನವನ್ನು ಬದಲಾಯಿಸಿದವು ಎಂದಿದ್ದಾರೆ.
ಐಪಿಎಲ್-2023ರಲ್ಲಿ , ಆ ಪಂದ್ಯ ಭಾಗಶಃ ಗುಜರಾತ್ ಪರವಾಲಿತ್ತು. ಎಲ್ಲರೂ ಈ ಪಂದ್ಯದಲ್ಲಿ ಗುಜರಾತ್ಗೆ ಗೆಲುವು ಖಚಿತ ಎಂದೇ ಭಾವಿಸಿದ್ದರು. ಆದರೆ ಕೊನೆಯ ಓವರ್ನಲ್ಲಿ ಕೆಕೆಆರ್ ಪರ ಮ್ಯಾಜಿಕ್ ಮಾಡಿದ್ದ ರಿಂಕು. ಓವರ್ನ ಮೊದಲ ಐದೂ ಎಸೆತಗಳಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇದೀಗ ಆ ಘಟನೆಯನ್ನು ನೆನೆದಿರುವ ರಿಂಕು ಅಂದಿನಿಂದ ತನ್ನ ಜೀವನ ಬದಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos