ಅಲೆಮಾರಿ ಜನಾಂಗಕ್ಕೆ ಅಕ್ಕಿ   

ಅಲೆಮಾರಿ ಜನಾಂಗಕ್ಕೆ ಅಕ್ಕಿ   

ಬಾದಾಮಿ;ಏ,8:ಕೊರೋನಾ ವೈರಸ್ ಭೀತಿ ಲಾಕ್‌ಡೌನ್ ಹಿನ್ನಲೆ ಹಸಿವಿನಿಂದ ಕಂಗಾಲಾಗಿದ್ದ ಗ್ರಾಮದ ಅಲೆಮಾರಿ ಜನಾಂಗಕ್ಕೆ ಸುಕ್ಷೇತ್ರ ಸೋಮನಕೊಪ್ಪ ಗ್ರಾಮದ ಪೂರ್ಣಾನಂದ ಮಠದಿಂದ ಸುಮಾರು ೧೨ ಕ್ವೀಂಟಲ್ ಅಕ್ಕಿ ಕೊಡಲಾಯಿತು.

ಶ್ರೀಮಠದ ಶಿವಲೋಹಿತ ಸ್ವಾಮಿಜೀ ಮಾತನಾಡಿ, ಚೇಳು, ಹಾವು, ಹಂದಿ ಸೇರಿದಂತೆ ಎಲ್ಲ ಪ್ರಾಣಿಗಳನ್ನ ತಿಂದು ಬದುಕುವ ಮನುಷ್ಯ ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ. ಇಂದು ಮನುಷ್ಯತ್ವವನ್ನ ಬಿಟ್ಟು ಬದುಕಿ ನಮ್ಮ ಸಾವನ್ನ ನಾವೆ ತಂದುಕೊಳ್ಳುತ್ತಿದ್ದೆವೆ, ನಾವೆಲ್ಲ ಇದ್ದಿದ್ದು ಸಾವಿನ ಅಂಚಿನಲ್ಲಿ ಜೀವ ಇದ್ದಾಗ ಬಡ ಜನರಿಗೆ ಕೈಲಾದಷ್ಟು ಸಹಾಯ ಸಹಕಾರ ಪುಣ್ಯದ ಕಾರ್ಯಗಳನ್ನ ಮಾಡಿ. ಸರ್ಕಾರ ಹೇಳಿದ ಹಾಗೆ ಕಾನೂನನ್ನ ಚಾಚುತಪ್ಪದೆ ಮಾಡಿ ಇಡಿ ಜಗತ್ತಿಗೆ ಆವರಿಸಿಕೊಂಡ ಕೊರೋನಾ ವೈರಸ್ ಮಹಾಮಾರಿ ರೋಗವನ್ನ ದೂರ ಮಾಡಿಕೊಳ್ಳಿ ಎಂದು ಹೇಳಿದರು.

ಜಾನಪದ ಕಲಾವಿಧ ಶ್ರೀಕಾಂತಗೌಡ ಗೌಡರ್ ಮಾತನಾಡಿ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಬಾರಿ ಉತ್ತಮ, ನಮ್ಮ ಪ್ರಧಾನಿಯವರು ಮಹಾಮಾರಿ ಕೊರೊನಾ ಹರಡುವ ಮುಂಚೆ ಲಾಕ್‌ಡೌನ್ ಅಸ್ತç ಉಪಯೋಗಿಸುವುದರ ಜೊತೆಗೆ ಹತೋಟೆಗೆ ತಂದರು. ಸಾಧು ಸಂತರು-ಶರಣರು, ನಡೆದಾಡಿ ಜಪ-ತಪ ಮಾಡಿದ ನಮ್ಮ ನಾಡಿನಲ್ಲಿ ಇಂಥ ವೈರಸ್ ಹರಡುವುದು ಅಸಾಧ್ಯ ಎಂದರು.

ಗ್ರಾಪಂ ಉಪಾಧ್ಯಕ್ಷ ವೆಂಕಣ್ಣ ಹೊರಕೇರಿ, ಶ್ರೀಕಾಂತಗೌಡ ಗೌಡರ, ಶಿವಾನಂದ ಮಣ್ಣೂರ, ಚಂದ್ರು ಬಿಲ್ಲಾರ, ದ್ಯಾಮಣ್ಣ ವಾಲಿಕಾರ, ಶಿವಾನಂದ ಗುಡಿಹಿಂದಿನ, ಹನಮಂತ ನರಗುಂದ, ಬೀರಪ್ಪ ಪೆಂಟಿ, ಸಿದ್ಧಪ್ಪ ಖಾನಾಪೂರ, ಬಸು ಕಟ್ಟಿಕಾರ, ಶೇಖಪ್ಪ ಪವಾಡಿನಾಯ್ಕರ್, ಸೇರಿದಂತೆ ಗ್ರಾಮಸ್ಥರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos