ಅಕ್ಕಿ ದರ ಇಳಿಕೆ

ಅಕ್ಕಿ ದರ ಇಳಿಕೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಸಾರ್ವಜನಿಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇಂದಿನಿಂದ ಅಕ್ಕಿ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಬಿಸಿಲಿನ ತಾಪಮಾನ ಹೇಗೆ ಏರಿಕೆ ಆಗುತ್ತದೆಯೋ ಅದೇ ರೀತಿ ದಿನಬಳಕ್ಕೆ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರಿಂದ ಜನರು ಬೆಂದು ಹೋಗಿದ್ದರು. ಆದರೆ ಇದೀಕ ಅಕ್ಕಿ ದರ ಇಳಿಕೆಯಾಗಿದೆ.

ಗಗನಕ್ಕೇರಿದ್ದ ಅಕ್ಕಿ ದರ ಇದೀಗ ಸ್ವಲ್ಪ ಇಳಿಕೆ ಕಂಡಿದೆ. ಸ್ಟೀಮ್ ರೈಸ್ ಅಕ್ಕಿ ದರ ಕಡಿಮೆಯಾಗಿದೆ. ಬೇಡಿಕೆಯ ರಾ ರೈಸ್ ದರ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ ಎಂದು ತಿಳಿದುಬಂದಿದೆ. ಬೇಸಿಗೆ ಬೆಳೆ ಬಂದಿರುವುದರಿಂದ ಅಕ್ಕಿ ದರ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಿದೆ. ಸ್ಟೀಮ್ ರೈಸ್ ದರ ತಗ್ಗಿದರೂ ಅದನ್ನು ಎಲ್ಲರೂ ಬಳಕೆ ಮಾಡುವುದಿಲ್ಲ. ಹೋಟೆಲ್‌ನವರು ಹೆಚ್ಚಿನ ಪ್ರಮಾಣದಲ್ಲಿ ಸ್ಟೀಮ್ ರೈಸ್ ಅನ್ನು ಬಳಕೆ ಮಾಡುತ್ತಾರೆ. ಇದರ ಬೆಲೆ ಇಳಿಕೆ ತಾತ್ಕಾಲಿಕ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆ ಆಗಿದ್ದು, ಭಾರತ್ ರೈಸ್ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಅಷ್ಟೇ ಅಲ್ಲದೆ ಅಕ್ಕಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. ಇವೆಲ್ಲ ಕಾರಣಗಳಿಂದ ಅಕ್ಕಿ ದರ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ.

ಸ್ಟೀಮ್ ರೈಸ್ ದರ ಕೆಜಿಗೆ 8 ರೂಪಾಯಿವರೆಗೆ ಕಡಿಮೆ ಆಗಿದ್ದು, ಕಳೆದ ಫೆಬ್ರವರಿಯಲ್ಲಿ ಆರ್‌ಎನ್‌ಆರ್ ಸ್ಟೀಮ್ ರೈಸ್ ದರ ಕೆ.ಜಿ.ಗೆ 57-58 ರೂಪಾಯಿ ಇತ್ತು. ಇದೀಗ 48-49 ರೂಪಾಯಿಗೆ ಇಳಿದಿದೆ. ಸೋನಾ ಸ್ಟೀಮ್ ರೈಸ್ ದರ ಕೆಜಿಗೆ 56-47 ರೂಪಾಯಿಗೆ ಇಳಿಕೆ ಆಗಿದೆ. ರಾ ರೈಸ್ ದರ 55-57 ರೂಪಾಯಿ ಇದೆ ಎಂದು ತಿಳಿದುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos