ಒಳಮೀಸಲಾತಿ ಅಸಂವಿಧಾನಿಕ, ಅವೈಜ್ಞಾನಿಕ

ಒಳಮೀಸಲಾತಿ ಅಸಂವಿಧಾನಿಕ, ಅವೈಜ್ಞಾನಿಕ

ತುಮಕೂರು: ಒಳಮೀಸಲಾತಿ ಎಂಬುದೇ ಅಸಂವಿಧಾನಿಕ, ಅವೈಜ್ಞಾನಿಕ ಹಾಗೂ ಅಪ್ರಸ್ತುತ ಎಂದು ಕೊರಚ, ಕೊರಮ, ಲಂಬಾಣಿ, ಬೋವಿ ಸಮುದಾಯಗಳ ಒಕ್ಕೂಟದ ಮುಖಂಡರು ಅಭಿಪ್ರಾಯಪಟ್ಟರು.

ವಿಧಾನಸೌಧದಲ್ಲಿ ಚರ್ಚೆಯಾಗಲಿ
ಪರಿಶಿಷ್ಟ ಜಾತಿಗಳ ಏಕತೆಯ ದೃಷ್ಠಿಯಿಂದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆಗೆ ಅವಕಾಶ ಮಾಡಿಕೊಡಬೇಕು, ಬಾದಿತ ಸಮುದಾಯಗಳಿಗೆ ವರದಿಯ ದೃಢೀಕೃತ ಪ್ರತಿ ನೀಡಬೇಕು, ಆಕ್ಷೇಪಣೆ, ತಕರಾರು ಸಲ್ಲಿಸಲು ಸಮುದಾಯಗಳಿಗೆ ಅವಕಾಶ ನೀಡಬೇಕು, ಆಯೋಗದ ಉದ್ಧೇಶ, ಕಾರ್ಯ ವಿಧಾನ ಮತ್ತು ಶಿಫಾರಸ್ಸುಗಳ ಕುರಿತೇ ಗೊಂದಲಗಳಿವೆ. ಈ ಆತಂಕ ದೂರ ಮಾಡಿದ ಮೇಲೆ ವಿಧಾನಸೌಧದಲ್ಲಿ ಚರ್ಚೆಗಿಟ್ಟು ಸರ್ಕಾರಗಳು ಮುಂದಿನ ಕ್ರಮ ಜರುಗಿಸಲಿ, ಯಾವುದೇ ಕಾರಣಕ್ಕೂ ಏಕಾಏಕಿ ಚರ್ಚೆ ನಡೆಸದೇ ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದೆಂದು ಒತ್ತಾಯಿಸಿದರು.
೯೯ ಸಮುದಾಯಗಳ ವಿರೋಧ
ರಾಜ್ಯ ಸರ್ಕಾರ ಮತಬ್ಯಾಂಕ್ ದೃಷ್ಠಿಕೋನದಲ್ಲಿಟ್ಟುಕೊಂಡು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡಲು ಮುಂದಾದರೆ ೯೯ ಸಮುದಾಯಗಳು ವಿರೋಧಿಸುತ್ತವೆ. ಅಲ್ಲದೆ ಸರ್ಕಾರದ ವಿರುದ್ಧ ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.
ಸೆ.೩೦ ರಂದು ಸರ್ಕಾರಕ್ಕೆ ಮನವಿ
ಬೋವಿ ಸಮುದಾಯಗಳ ನಡುವೆ ಚರ್ಚೆ ನಡೆಸಬೇಕು, ಇದರ ಸಾಧಕ ಬಾಧಕಗಳನ್ನು ಚರ್ಚಿಸದೆ ಯಥಾವತ್ ಜಾರಿಗೆ ಮುಂದಾಗಬಾರದು ಎಂದು ಒತ್ತಾಯಿಸಿ ಸೆ.೩೦ ರಂದು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos