ರೈಲು ನಿಲ್ಲಿಸಲು ಮನವಿ

ರೈಲು ನಿಲ್ಲಿಸಲು ಮನವಿ

ತಿಪಟೂರು, ಜ. 03: ತುಮಕೂರಿನಲ್ಲಿ ನಡೆಯುವ ಪ್ರದಾನಿ ನರೇಂದ್ರಮೋದಿಯವರ ಕೃಷಿ ಕರ್ಮಪಣ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಹುಬ್ಬಳ್ಳಿಯಿಂದ ತುಮಕೂರಿಗೆ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತದ್ದ ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ನಗರದ ರೈಲ್ವೆನಿಲ್ದಾಣಕ್ಕೆ ಆಗಮನಿಸಿದ ಸಂದರ್ಭದಲ್ಲಿ ತಿಪಟೂರು ಶಾಸಕ ಬಿ.ಸಿ ನಾಗೇಶ್ ಕೆಲವು ಬೇಡಿಕೆಗಳಿದ್ದ ಮನವಿಯನ್ನು ಸಲ್ಲಿಸಿದರು.

ಹುಬ್ಬಳ್ಳಿ ಮತ್ತು ಬೆಂಗಳುರು ನಡುವೆ ಸಂಚರಿಸುವ ರೈಲುಗಳಲ್ಲಿ ಅತಿಹೆಚ್ಚು ಆದಾಯವನ್ನು ನೀಡುವ ದಾವಣಗೆರೆಯನ್ನು ಬಿಟ್ಟರೆ ತಿಪಟೂರು ಹೆಚ್ಚು ಆದಾಯವನ್ನು ನೀಡುತ್ತಿದೆ ಆದರೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆಯ ಜೊತಗೆ ಅತಿಹೆಚ್ಚು ಜನಸಂದಣಿ ಇರುವುದರಿಂದ ಇನ್ನೊಂದು ಟಿಕೆಟ್ ಕೌಂಟರ್ ತೆರೆಯಬೇಕು. ವಯೋವೃದ್ಧರು, ಅಂಗವಿಕಲರು ಒಂದು ಪ್ಲಾಟ್‌ಫಾರಂನಿಂದ ಇನ್ನೊಂದು ಪ್ಲಾಟ್ ಪಾರಂಗೆ ಹೋಗಲು ತುಂಬಾ ಕಷ್ಟಪಡುತ್ತಾರೆ ಅಂತವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ಮುಖ್ಯವಾಗಿ ಶಿವಮೊಗ್ಗ, ಹುಬ್ಬಳ್ಳಿ ಜನಶತಾಬ್ದಿ ಜೊತೆಗೆ ಗೋಗುಂಬಜ್, ಕುರ್‌ಕುರೇ ಮುಂತಾದ ರೈಲುಗಾಡಿಗಳನ್ನು ನಿಲ್ಲಿಸಬೇಕು.

ಗ್ರಾಮಾಂತರ ಪ್ರದೇಶಗಳಾದ ಅರಳಗುಪ್ಪೆ, ಕರಡಿ ನಿಲ್ದಾಣಗಳಲ್ಲಿ ಚಿಕ್ಕಮಗಳೂರು, ಹರಿಹರ ಮುಂತಾದ ಕೆಲವು ರೈಲುಗಾಡಿಗಳನ್ನು ನಿಲ್ಲಿಸಿ ಈ ಭಾಗದ ವಿದ್ಯಾರ್ಥಿಗಳಿಗೆ, ರೈತರಿಗೆ ಅನುಕೂಲಮಾಡಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos