ರಾಜಕಾಲುವೆ ತೆರವಿಗೆ ತಂಡ ರಚಿಸಲು ಮನವಿ

ರಾಜಕಾಲುವೆ ತೆರವಿಗೆ ತಂಡ ರಚಿಸಲು ಮನವಿ

ಕೆ.ಜಿ.ಎಫ್: ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ವಿಶೇಷ ತಂಡ ರಚನೆ ಮಾಡಿ ಚೆಕ್‌ಡ್ಯಾಂ ಮತ್ತು ರಾಜಕಾಲುವೆ ನಾಶ ಮಾಡಿರುವ ಏಷಿಯನ್ ಪೆಪ್‌ಟೆಕ್ ಖಾಸಗಿ ಸೋಲರ್ ಆಡಳಿತ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದಿಂದ ತಾಲ್ಲೂಕು ಕಚೇರಿ ಮುಂದೆ ಹೋರಾಟ ಮಾಡಿ ಉಪ ತಹಶೀಲ್ದಾರ್ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ಜಿಲ್ಲಾಗೌರವಾಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್, ಮಾತನಾಡಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಕ್ಕೆ ಜನರ ಅಭಿವೃದ್ಧಿ ಮತ್ತು ಸರ್ಕಾರಗಳ ಕೆಲಸಗಳಿಗೆ ತಿಂಗಳಾನುಗಟ್ಟಲೆ ಹುಡುಕಿದರೂ ಸರ್ಕಾರಿ ಜಮೀನು ಸಿಗುವುದಿಲ್ಲ. ಆದರೆ ಕ್ಯಾಸಂಬಳ್ಳಿ ವ್ಯಾಪ್ತಿಯ ಕಾಜಿಮಿಟ್ಟಹಳ್ಳಿ ಸುತ್ತಮುತ್ತಲ ಸುಮಾರು ನೂರಾರು ಎಕರೆಯಲ್ಲಿ ನಿರ್ಮಿಸಿರುವ ಖಾಸಗಿ ಸೋಲಾರ ಕಂಪನಿ ಆಡಳಿತ ಮಂಡಳಿ ಕೋಟ್ಯಾಂತರ ರೂಪಾಯಿ ಬೆಳೆ ಮಾಡುವ ಚೆಕ್‌ಡ್ಯಾಂಗಳನ್ನು ನಾಶ ಮಾಡುವ ಜೊತೆಗೆ ರಾಜಕಾಲುವೆಯನ್ನು ಮತ್ತು ಸರ್ಕಾರಿ ಶಾಲೆಯ ೧ ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನೆಪ ಮಾತ್ರಕ್ಕೆ ಸರ್ವೆ ಮಾಡಿದ್ದೇವೆ.

ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್ ಶ್ರೀನಿವಾಸ್ ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೆರೆ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುತ್ತಿದ್ದೇವೆ. ಆದರೆ ಒತ್ತುವರಿದಾರರಿಂದ ತಹಶೀಲ್ದಾರ್‌ರವರಿಗೂ ಸಹ ಪ್ರಾಣಬೆದರಿಕೆ ಇದೆ. ಅದರ ಜೊತೆಗೆ ಏಷಿಯನ್ ಪೆಪ್‌ಟೆಕ್ ಸೋಲಾರ್ ಕಂಪನಿ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ಮಾನ್ಯ ಡಿ.ಸಿ ಹಾಗೂ ಎ.ಸಿರವರ ಗಮನಕ್ಕೆ ತಂದು ಸರ್ವೆ ಸಹ ಮಾಡಿರುತ್ತೇವೆ. ಯಾವುದೇ ಒತ್ತುವರಿಯಾಗಿರುವುದಿಲ್ಲ. ಚೆಕ್‌ಡ್ಯಾಂಗಳನ್ನು ರಾಜಕಾಲುವೆಗಳನ್ನು ಸರಿಪಡಿಸುವಂತೆ ನೊಟೀಸ್ ನೀಡಿದ್ದೇವೆಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos