ಬಾಡಿಗೆ ಮನೆ: ಯಶ್ ತಾಯಿ ವಿರುದ್ಧ ಎಫ್ ಐಆರ್ ದಾಖಲು

ಬಾಡಿಗೆ ಮನೆ: ಯಶ್ ತಾಯಿ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು, ಜೂನ್.13: ಕನ್ನಡ ಚಿತ್ರರಂಗದಲ್ಲ ಹೆಚ್ಚು ಖ್ಯಾತಿ ಹೊಂದಿರುವ ನಟರಲ್ಲಿ ಯಶ್ ಕೂಡ ಒಬ್ಬರು. ಹೌದು, ಯಶ್ ತಾಯಿಯವರು ಇಷ್ಟು ದಿನ ಬಾಡಿಗೆ ಮನೆಯಲ್ಲಿ ಇದ್ದರು.  ಈಗ ಬಾಡಿಗೆ ಮನೆ ಖಾಲಿ ಮಾಡಿದ್ದಾರೆ. ಯಶ್ ತಾಯಿಯವರು ಬಾಡಿಗೆ ಮನೆ ಖಾಲಿ ಮಾಡುವಾಗ ವಸ್ತುಗಳನ್ನು ಧ್ವಂಸ ಮಾಡಿದ ಆರೋಪದಲ್ಲಿ ಯಶ್ ತಾಯಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎನ್ನಲಾಗಿದೆ.

ಬನಶಂಕರಿ 3ನೇ ಹಂತದ 3ನೇ ಬ್ಲಾಕ್ ನ 5 ನೇ ಕ್ರಾಸ್ ನಲ್ಲಿ ವಾಸವಿದ್ದ ಬಾಡಿಗೆ ಮನೆಯನ್ನು ಪುಷ್ಪಾ ಅವರು ಇತ್ತೀಚೆಗಷ್ಟೇ ಮನೆ ಖಾಲಿ ಮಾಡಿದ್ದರು. ಮನೆ ಖಾಲಿ ಮಾಡುವ ವೇಳೆ ಪುಷ್ಪಾ ಅವರು ಎಲೆಕ್ಟೀಕ್ ವಸ್ತುಗಳು, ಬಲ್ಬ್ ಗಳು, ಫ್ಯಾನ್ ಗಳು ಸೇರಿದಂತೆ ಅನೇಕ ವಸ್ತುಗಳನ್ನು ಹಾನಿ ಮಾಡಿದ್ದು, ಒಟ್ಟು 28 ಲಕ್ಷ ರೂ. ನಷ್ಟವಾಗಿದೆ ಎಂದು ಆರೋಪಿಸಿ ಮನೆ ಒಡೆತಿ ಡಾ. ವನಜಾ ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಆಧರಿಸಿ ಪೊಲೀಸರು, ಎನ್ ಸಿಆರ್ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ ಎಂದು ಪೊಲೀಸರಿಗೆ ಸೂಚನೆ ನೀಡಿತ್ತು. ಅದರನ್ವಯ ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟು ಮಾಡಿದ ಆರೋಪದಡಿ ಎಫ್ ಐ ಆರ್ ದಾಖಲಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos