ಆರೋಗ್ಯ ಕೇಂದ್ರಕ್ಕೆ ಅನುದಾನ ಬಿಡುಗಡೆ

ಆರೋಗ್ಯ ಕೇಂದ್ರಕ್ಕೆ ಅನುದಾನ ಬಿಡುಗಡೆ

ಶಹಾಪುರ : ಸಗರ ಮತ್ತು ನಗನೂರ ಗ್ರಾಮಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ಹಾಗೂ ಸಿಬ್ಬಂದಿ ವಸತಿ ನಿಲಯ ಕಟ್ಟಡಗಳಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಲಾ ರೂ.೧ಕೋಟಿ ೧೭ಲಕ್ಷ ಅನುದಾನ ಬಿಡುಗಡೆಗೊಳಿಸಿ ಆದೇಶಿಸಿದೆ ಎಂದು ಶಾಸಕ ಶರಣಬಸಪ್ಪಗೌಡ ಗುರುವಾರ ತಿಳಿಸಿದ್ದಾರೆ.

ಬಹುದಿನಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಯಲ್ಲಿ ಮತ್ತು ವ್ಯಾಜ್ಯದಲ್ಲಿತ್ತು. ಅದಕ್ಕಾಗಿ ಇತ್ತಿಚೆಗೆ ನೂತನವಾಗಿ ಗ್ರಾಮದಲ್ಲಿ ೨ಎಕರೆ ಜಮೀನು ಪಡೆದುಕೊಳ್ಳಲಾಗಿತ್ತು. ಸಗರ ಹಾಗೂ ಮತಕ್ಷೇತ್ರದ ನಗನೂರ ಗ್ರಾಮಗಳಲ್ಲಿ ಪಿಹೆಚ್ಸಿ ನೂತನ ಕಟ್ಟಡ ಮತ್ತು ದಿನದ ೨೪ಗಂಟೆಗಳು ಸಾರ್ವಜನಿಕರಿಗೆ ಆರೋಗ್ಯ ಸೇವೆ ಲಭಿಸುವಂತಾಗಲು ಸಿಬ್ಬಂದಿಯವರಿಗೆ ವಸತಿ ನಿಲಯಕ್ಕಾಗಿ ಇಲಾಖೆಗೆ ರೂ.೩ಕೋಟಿ ೫೦ಲಕ್ಷ ವೆಚ್ಚದಲ್ಲಿ ಕ್ರಿಯಾಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶಾಸಕರ ಮನವಿಗೆ ಸ್ಪಂದಿಸಿ ಆದೇಶ ನೀಡಿದೆ. ಆದಷ್ಟು ಬೇಗನೆ ಈ ಎರಡು ಗ್ರಾಮಗಳಲ್ಲಿಯ ಪಿಹೆಚ್ಸಿ ಕೇಂದ್ರಗಳ ಸುತ್ತಲಿನ ಗ್ರಾಮಗಳ ಜನತೆಗೆ ಅನಾರೋಗ್ಯ ಸಮಸ್ಯೆಯ ತೊಂದರೆ ನಿಭಾಯಿಸಲು ಸಹಕಾರಿಯಾಗಬಲ್ಲದು ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos