ಬೆಲೆ ಏರಿಕೆಯಿಂದ ಕೆಂಪು ಮೆಣಸಿನಕಾಯಿಗೆ ಕಳ್ಳರ ಕಾಟ!

ಬೆಲೆ ಏರಿಕೆಯಿಂದ ಕೆಂಪು ಮೆಣಸಿನಕಾಯಿಗೆ ಕಳ್ಳರ ಕಾಟ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದುಬಾರಿ ದುನಿಯಾ ಆಗಿರುವುದರಿಂದ ಪ್ರತಿ ದಿನ ಬಳಸುತ್ತಿರು ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬರದ ನಡುವೆ ಬೆಳೆಗಳು ಹಾನಿಗೊಂಡು ದಾಸ್ತಾನು ಇಲ್ಲದ ಹಿನ್ನೆಲೆ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿ ಕೊಂಡಿರುವ ಕಳ್ಳರು ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಕದಿಯುತ್ತಿದ್ದಾರೆ. ಟೊಮೆಟೋ, ಈರುಳ್ಳಿ ಬೆಳೆಗಳ ಬೆಲೆ ಏರಿಯಾಗಿದ್ದಾಗಲೂ ಈ ತರಕಾರಿಗಳು ಕಳ್ಳತನವಾಗುತ್ತಿದ್ದವು. ಇದೀಗ ಕೆಂಪು ಮೆಣಿಸಿನಕಾಯಿ ಬೆಲೆಯಲ್ಲಿ ಏರಿಕೆಯಾಗುತ್ತಿದ್ದಂತೆ ಬಾಗಲಕೋಟೆ  ತಾಲೂಕಿನಲ್ಲಿ ಕಳ್ಳರ ಕಾಟ ಶುರುವಾಗಿದೆ.

ಮನ್ನಿಕಟ್ಟಿ, ಬೆನಕಟ್ಟಿ, ಬೇವೂರು, ಹಳ್ಳೂರು ಭಗವತಿ ಗ್ರಾಮದ ವ್ಯಾಪ್ತಿಯಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಜೋರಾಗಿದೆ. ಹಗಲು ರಾತ್ರಿಯೆನ್ನದೇ ಕಳ್ಳರು ರೈತರಿಲ್ಲದ ವೇಳೆ ಹೊಲಕ್ಕೆ ನುಗ್ಗಿ ಕ್ವಿಂಟಲ್ ಗಟ್ಟಲೇ ಮೆಣಸಿನಕಾಯಿಗಳನ್ನು ಕದ್ದೊಯ್ಯುತ್ತಿದ್ದಾರೆ. ಮೆಣಸಿನಕಾಯಿ ಬೆಲೆ ಗಗನಕ್ಕೆ ಏರಿದ ಸಂದರ್ಭದಲ್ಲಿ ಕಳ್ಳರು ಮೆಣಸಿನಕಾಯಿ ಕಳ್ಳತನ ಮಾಡುತ್ತಿರುವುದು ರೈತರ ನಿದ್ದೆಗೆಡಿಸಿದೆ. ಹಗಲು ರಾತ್ರಿಯೆನ್ನದೇ ಬೆಳೆ ಕಾಯುವ ಸ್ಥಿತಿ ಬಂದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos