ಬಿಬಿಎಂಪಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಬಿಬಿಎಂಪಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಬೆಂಗಳೂರು, ಸೆ. 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್ ಅಡಿಯಲ್ಲಿ ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಲು ಪ್ರಕಟಣೆ ಹೊರಡಿಸಿದೆ.

ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಂತೆ ನೇರ ಸಂದರ್ಶನಕ್ಕೆ ಹಾಜರಾಗಲು ನೋಟಿಫಿಕೇಶನ್ ನಲ್ಲಿ ತಿಳಿಸಿದೆ. ಜಿಲ್ಲಾ ಸಲಹೆಗಾರ, ಮೆಡಿಕಲ್ ಆಫೀಸರ್, ಪ್ರೋಗ್ರಾಮರ್ ಮ್ಯಾನೇಜರ್, ಎಪಿಡೆಮಿಯೋಲಾಜಿಸ್ಟ್ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಲು ಬಿಬಿಎಂಪಿ ಉದ್ದೇಶಿಸಿದೆ.

ನೋಟಿಫಿಕಶನ್ ಹೊರಡಿದ ದಿನಾಂಕಕ್ಕೆ ಅಭ್ಯರ್ಥಿಗೆ 18 ವರ್ಷ ತುಂಬಿರಬೇಕು. ಸಾಮಾನ್ಯ ಅಭ್ಯರ್ಥಿಗಳು ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು. ಎಸ್ ಸಿ, ಎಸ್ ಟಿ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ಮೀರಿರಬಾರದು.

ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಅಪಡೇಟೆಡ್ ಲೇಟೆಸ್ಟ್ ರೆಸ್ಯೂಮ್ ಜೊತೆಗೆ ಅಗತ್ಯ ವಿದ್ಯಾರ್ಹತೆ ಮತ್ತು ಕರ್ತವ್ಯ ಅನುಭವದ ದಾಖಲೆಗಳನ್ನು ತಂದಿರಬೇಕು.

ಸಂದರ್ಶನ ನಡೆಯುವ ದಿನಾಂಕ : ಸೆಪ್ಟೆಂಬರ್ 24,2019. ಸಂದರ್ಶನ ನಡೆಯುವ ಸ್ಥಳ : ನೌಕರರ ಭವನ, ಬಿಬಿಎಂಪಿ ಮುಖ್ಯ ಕಛೇರಿ, ಬೆಂಗಳೂರು.

ಫ್ರೆಶ್ ನ್ಯೂಸ್

Latest Posts

Featured Videos