ಬೆಂಗಳೂರು ಕೆರೆಗಳ ಪುನಶ್ಚೇತನ: ತರಾಟೆಗೆ ತೆಗೆದುಕೊಂಡ ಎನ್ಜಿಟಿ

ಬೆಂಗಳೂರು ಕೆರೆಗಳ ಪುನಶ್ಚೇತನ: ತರಾಟೆಗೆ ತೆಗೆದುಕೊಂಡ ಎನ್ಜಿಟಿ

ಬೆಂಗಳೂರು, ಡಿ. 11: ಬೆಂಗಳೂರಿನ ಬೆಳ್ಳಂದೂರು, ಅಗರ ಮತ್ತು ವರ್ತೂರು ಸೇರಿ ಹಲವು ಕೆರೆಗಳ ಪುನಶ್ಚೇತನ ಕುರಿತು ಎನ್ಜಿಟಿ ಪೀಠ ಇಂದು ವಿಚಾರಣೆ ನಡೆಸಿದ್ದು, ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ಬಿ ಹಾಗೂ ಕೆಎಸ್ಪಿಸಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ನಮ್ಮ ಬೆಂಗಳೂರು ಪ್ರತಿಷ್ಠಾನವು ಸಹ ಕೋರ್ಟ್ನಲ್ಲಿ ಅರ್ಜಿದಾರರಾಗಿದ್ದು, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ಬಿ ಹಾಗೂ ಕೆಎಸ್ಪಿಸಿಬಿ ವಿಚಾರಣೆ ಎದುರಿಸುತ್ತಿದೆ. ಸುಮಾರು 3 ವರ್ಷಗಳಿಂದ ಎನ್ಜಿಟಿ ಪ್ರತಿ ವಿಚಾರಣೆಯಲ್ಲಿಯೂ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳನ್ನು ಪಾಲಿಸುತ್ತಿಲ್ಲ.

ಆದರೆ, ಜಲಮೂಲಗಳನ್ನು ರಕ್ಷಿಸುವಲ್ಲಿ ಸರಕಾರ ಅವರ ಸಹಾಯ ಪಡೆಯಲು ಆಸಕ್ತಿ ಹೊಂದಿಲ್ಲ. ಎಸ್ಟಿಪಿಗಳನ್ನು ನಿರ್ಮಿಸಲು ವಿಳಂಬವಾಗಿದ್ದಕ್ಕಾಗಿ ನ್ಯಾ. ಆದರ್ಶ್ ಕುಮಾರ್ ಗೋಯೆಲ್ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಎಸ್ಟಿಪಿಗಳನ್ನು ನಿರ್ಮಿಸಲು ಇನ್ನೂ ಎರಡು ವರ್ಷ ಕಾಲಾವಕಾಶ ಕೇಳಿದ್ದ ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ, ಇದನ್ನು 9 ತಿಂಗಳಲ್ಲಿ ಮಾಡಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಈ ಹಿನ್ನೆಲೆ ಒಳಚರಂಡಿ ನೀರು ಪ್ರವೇಶಿಸದಂತೆ ಎಸ್ಟಿಪಿಗಳ ನಿರ್ಮಾಣವನ್ನು ಒಂಬತ್ತು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಎನ್ಜಿಟಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಜತೆಗೆ ಸೆಪ್ಟೆಂಬರ್ 2020ರ ವೇಳೆಗೆ ಎಸ್ಟಿಪಿಗಳ ಕಾಮಗಾರಿ ಪೂರ್ಣಗೊಳ್ಳಬೇಕು ಎಂದೂ ಡೆಡ್ಲೈನ್ ನೀಡಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ನಮ್ಮ ಬೆಂಗಳೂರು ಫೌಂಡೇಷನ್ನ ಪ್ರಧಾನ ವ್ಯವಸ್ಥಾಪಕ ಹರೀಶ್ ಕುಮಾರ್, ನಿರ್ದಿಷ್ಟ ಸಮಯದೊಳಗೆ ಒಂದು ನಿರ್ದಿಷ್ಟ ಚಟುವಟಿಕೆಗೆ ನಿರ್ದಿಷ್ಟ ಅಧಿಕಾರಿ ಜವಾಬ್ದಾರನಾಗಿರಬೇಕು ಎಂದು ನಾವು ಬಯಸುತ್ತೇವೆ. 9 ತಿಂಗಳಲ್ಲಿ ಒಳಚರಂಡಿ ಹರಿವನ್ನು ನಿಲ್ಲಿಸಬಹುದು ಎಂದು ತಜ್ಞರು ಹೇಳಿದರೆ ಬಿಡಬ್ಲ್ಯೂಎಸ್ಎಸ್ಬಿ ಇನ್ನೂ 2 ವರ್ಷಗಳನ್ನು ಕೇಳಿದೆ. ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಬಿಡಬ್ಲ್ಯೂಎಸ್ಎಸ್ಬಿಯ ಆಸಕ್ತಿಯ ಕೊರತೆ ಮತ್ತು ಲೆಕ್ಕವಿಲ್ಲದಿರುವಿಕೆಯನ್ನು ಮಾತ್ರ ಇದು ತೋರಿಸುತ್ತದೆ. ಹೊಣೆಗಾರಿಕೆಯನ್ನು ವಿಂಗಡಿಸಬೇಕಾಗಿದೆ .ಇಲ್ಲದಿದ್ದರೆ ನಾವು ಸಮಯದೊಳಗೆ ವಿಷಯಗಳನ್ನು ಸರಿಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos