ಎತ್ತಿನಹೊಳೆ ಯೋಜನೆಯಲ್ಲಿ ಹಣ ಗುಳುಂ? ರೇವಣ್ಣ ಮೇಲೆ ಗಂಭೀರ ಆರೋಪ..!

ಎತ್ತಿನಹೊಳೆ ಯೋಜನೆಯಲ್ಲಿ ಹಣ ಗುಳುಂ? ರೇವಣ್ಣ ಮೇಲೆ ಗಂಭೀರ ಆರೋಪ..!

ಬೇಲೂರು,ಮೇ. 21, ನ್ಯೂಸ್ ಎಕ್ಸ್ ಪ್ರೆಸ್ : ಬರ ಪೀಡಿತ ಜಿಲ್ಲೆಗಳ ಜನರಿಗೆ ‘ ಕುಡಿಯುವ ನೀರಿನ ಮಹತ್ವದ ಎತ್ತಿನಹೊಳೆ ನೀರು ಪೂರೈಕೆ ಮಾಡಲು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಯಿಂದ ಚುನಾವಣೆ ವೆಚ್ಚಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ, ಇಡೀ ಕಾಮಗಾರಿ ಭ್ರಷ್ಟಾಚಾರದಲ್ಲಿ ಮುಳುಗುವಂತೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್‌ ಆರೋಪಿಸದ್ದಾರೆ.

ದೇವೇಗೌಡ, ರೇವಣ್ಣ ಸ್ಥಳಕ್ಕೇ ಭೇಟಿ ನೀಡಿಲ್ಲ..!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ‘ಸಕಲೇಶಪುರ ಭಾಗದಿಂದ ಬಯಲು ಸೀಮೆ ಪ್ರದೇಶಕ್ಕೆ ಕುಡಿಯುವ ನೀರಿಗಾಗಿ ಎತ್ತಿನ ಹೊಳೆ ಯೋಜನೆ ರೂಪಿಸಲಾಗಿದ್ದು ಸಾವಿರಾರು ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿ ತ್ವರಿತವಾಗಿ ಕಾಮಗಾರಿ ನಡೆಯಲು ಕ್ರಮ ಕೈಗೊಂಡಿತ್ತು. ಅದರೆ,  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಚಿವ ರೇವಣ್ಣ ಈವರೆಗೂ ಸ್ಥಳಕ್ಕೆ ಭೇಟಿ ನೀಡದೆ ಕಾಮಗಾರಿ ಕುಠಿತಗೊಂಡಿದೆ ಎಂದು ಆರೋಪಿಸಿದರು. ದಲಿತ ಗುತ್ತಿಗೆದಾರರಿಗೆ ಮೀಸಲಿದ್ದ 50 ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ತಮ್ಮ ಬೆಂಬಲಿತ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಪ್ಯಾಕೇಜ್‌ ಮಾಡಿ ವಂಚಿಸಿದ್ದಾರೆ ಎಂದು ದೂರಿದರು.

ಫ್ರೆಶ್ ನ್ಯೂಸ್

Latest Posts

Featured Videos