ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಜ್ಜು

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಜ್ಜು

ಕೆ.ಆರ್.ಪೇಟೆ : ಕೊರೋನಾ ಲಾಕ್ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಇದೇ ಜೂನ್ 25ರಿಂದ ಜುಲೈ 4ರ ವರೆಗೆ ನಡೆಯಲಿವೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಪರೀಕ್ಷೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ, ಈ ಬಾರಿ 56 ಶಾಲೆಗಳ ಒಟ್ಟು 2822 ವಿದ್ಯರ‍್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅವರು ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ ಸರ‍್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಸಂಬ0ಧ ಹಮ್ಮಿಕೊಳ್ಳಲಾಗಿರುವ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು.

ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ 3ತಿಂಗಳಿನಿ0ದ ಸ್ಥಗಿತಗೊಂಡಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಿಗಧಿತ ದಿನಾಂಕಗಳಲ್ಲಿ ಕೊರೋನಾ ಸೋಂಕು ತಡೆಯುವ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕುಗಳನ್ನು ಧರಿಸಿ ಪರೀಕ್ಷೆ ಬರೆಯಲು ಅವಕಾಶವನ್ನು ಸರ‍್ವಜನಿಕ ಶಿಕ್ಷಣ ಇಲಾಖೆಯು ಅವಕಾಶ ಕಲ್ಪಿಸಿದೆ. ಪರೀಕ್ಷಾ ಕೇಂದ್ರಗಳನ್ನು ಸಂಪರ‍್ಣವಾಗಿ ಸ್ಯಾನಿಟೈಸರ್ ದ್ರಾವಣದಿಂದ ಸ್ವಚ್ಚಗೊಳಿಸಿ ಪರೀಕ್ಷೆ ಬರೆಯಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು.

ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆಗಳು ನಡೆಯಲಿವೆ. ತಾಲೂಕಿನಲ್ಲಿ ಈ ಭಾರಿ ಒಟ್ಟು 56ಪ್ರೌಢಶಾಲೆಗಳ 2822 ವಿದ್ಯಾಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ಪೈಕಿ 1436 ಹೆಣ್ಣು,1386 ಗಂಡು ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅವರು ಮಾಹಿತಿ ನೀಡಿದರು.

ಈ ಸಂದರ್ದಭದಲ್ಲಿ ಶಿಕ್ಷಣ ಸಂಯೋಜಕರಾದ ಎಚ್.ಎನ್.ಚಂದ್ರಶೇಖರ್, ವೇಣುಗೋಪಾಲ್, ಜ್ಞಾನೇಶ್, ಮೋಹನ್, ನೀಲಾಮಣಿ, ಸೋಮಶೇಖರ್, ಬಿ.ಆರ್.ಪಿ. ಕೆ.ಪಿ.ಬೋರೇಗೌಡ, ಸಿ.ಎಸ್.ಅಶೋಕ್, ಅನಂತಕುಮಾರ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಸನ್ನಕುಮಾರ್, ಮುಖ್ಯ ಶಿಕ್ಷಕ ರಾಘವೇಂದ್ರ, ಲೋಕೇಶ್ ಮತ್ತಿತರರು ಈ ಸಂರ‍್ಭದಲ್ಲಿ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos